ಪ್ರಾರಂಭ ಪದದ ಹುಡುಕು
ಗಂಡ ತನ್ನಯದೆಂಬ | ಲಂಡೆ ತನ್ನಯದೆಂಬ ಖಂಡಪರಶುವಿನ ವರಪುತ್ರ - ನಾನು ನೆರೆ ಕಂಡುದೆನೆ ಪೇಳ್ವೆ ಸರ್ವಜ್ಞ
ಗಂಡಾಗಬೇಕೆಂದು | ಪಿರಿಂಡವ ನುಂಗಲು ಲಂಡೆ ಮಾಳ್ವೆಯೊಳು ಜನಿಸಿ - ಲೋಕದೊಳು ಕಂಡುದನೆ ಪೇಳ್ವೆ ಸರ್ವಜ್ಞ
ಗಡಿಗೆ-ಮಡಕೆಯ ಕೊಂಡು | ಅಡುವಡಾವಿಗೆಯೊಳಗೆ ಬಿಡದೆ ಮಳೆಮೋಡ ಹಿಡಿಯಲವ - ರಿಬ್ಬರಿಗು ತಡೆ ಬಿಡಲಾಯ್ತು ಸರ್ವಜ್ಞ
ಗಡಿಯ ನಾಡಿನ ಸುಂಕ | ತಡೆಯಲಂಬಿಗೆ ಕೂಲಿ | ಮುಡಿಯಂಬಂತೆ ಒಳಲಂಚ ಇವು ನಾಲ್ಕು | ಅಡಿಯಿಟ್ಟದಿಲ್ಲ
ಗಡ್ಡವಿಲ್ಲದ ಮೋರೆ | ದುಡ್ಡು ಇಲ್ಲದ ಚೀಲ | ಬಡ್ಡಿಯಾ ಸಾಲ ತೆರುವವನ ಬಾಳುವೆಯು | ಅಡ್ಡಕ್ಕು ಬೇಡ ಸರ್ವಜ್ಞ ||
ಗತವಾದ ಮಾಸವನು | ಗತಿಯಿಂದ ದ್ವಿಗುಣಿಸುತ | ಪ್ರತಿಪದದ ತಿಥಿಯನೊಡಗೂಡೆ ಕರಣ ತಾ | ನತಿಶಯದಿ ಬಕ್ಕು ಸರ್ವಜ್ಞ ||
ಗಂಧವನು ಇಟ್ಟಮೆ ಲಂದದಲಿ ಇರಬೇಕು | ನಿಂದೆ ಕುಂದುಗಳ ಸುಟ್ಟವನು ಧರಣಿಯಲಿ | ಇಂದುಧರನೆಂದ ಸರ್ವಜ್ಞ ||
ಗವುಡನೊಳು ಹಗೆತನವು | ಕಿವುಡನೊಳು ಏಕಾಂತ | ಪ್ರವುಢನೊಳೂ ಮೂಡನುಪದೇಶ ಹಸುವಿಗೆ | ತವುಡನಿಟ್ಟಂತೆ ಸರ್ವಜ್ಞ ||
ಗಂಹರವ ಹೊಕ್ಕಿರ್ದು | ಸಿಂಹಗಳ ನಿರಿಯುವದು | ಸಂಹರವ ಮಾಡಿ ತರಿಯುವದು ದುರ್ಜನರ | ಜಿಹ್ವೆ ಕೇಳೆಂದ ಸರ್ವಜ್ಞ ||
ಗಾಜು ನೋಟಕೆ ಲೇಸು | ತೇಜಿ ಏರಲು ಲೇಸು | ರಾಜಂಗೆ ವಸ್ತ್ರ ಇರಲೇಸು ಊಟಕ್ಕೆ | ರಾಜನ್ನ ಲೇಸು ಸರ್ವಜ್ಞ ||
ಗಾಜು ನೋಟಕೆ ಲೇಸು | ಮಾನಿನಿಗೆ ಪತಿ ಲೇಸು | ಸ್ವಾನುಭಾವಿಯ ನುಡಿ ಲೇಸು ಎಲ್ಲಕ್ಕು ನಿ | ಧಾನವೇ ಲೇಸು ಸರ್ವಜ್ಞ ||
ಗಾಡವಿಲ್ಲದ ಬಿಲ್ಲು | ಕೋಡಿಯಿಲ್ಲದ ಕೆರೆಯು | ಬೇಡಂಗೆ ಮಾಡಿದುಪಕಾರ ಕಡೆಯಲ್ಲಿ | ಕೇಡು ಕಾಣಯ್ಯ ಸರ್ವಜ್ಞ ||
ಗಾಣಿಗನ ಒಡನಾಟ | ಕೋಣನಾ ಬೇಸಾಯ | ಕ್ಷೀಣಿಸುವ ಕುತ್ತ-ಸಮರ ಕ್ಷಾಮಗಳಿಂದ | ಪ್ರಾಣವೇಗಾಸಿ ಸರ್ವಜ್ಞ ||
ಗಾಣಿಗನು ಈಶ್ವರನ | ಕಾಣನೆಂಬುದು ಸಹಜ | ಏಣಾಂಕಧರನು ಧರೆಗಿಳಿಯಲವನಿಂದ | ಗಾಣವಾಡಿಸುವ ಸರ್ವಜ್ಞ ||
ಗಾಳಿ-ಧೂಳಿಯ ದಿನಕೆ | ಮಾಳೀಗೆ ಮನೆ ಲೇಸು | ಹೊಳೀಗೆಯು ತುಪ್ಪ ಉಣಲೇಸು ಬಾಯಿಗಂ | ವೀಳ್ಯವೇ ಲೇಸು ಸರ್ವಜ್ಞ ||