ಪ್ರಾರಂಭ ಪದದ ಹುಡುಕು

(56) (34) (14) (2) (28) (4) (0) (0) (33) (3) (1) (19) (4) (0) ಅಂ (7) ಅಃ (7) (87) (1) (23) (0) (0) (5) (0) (22) (0) (0) (0) (0) (0) (0) (0) (33) (0) (14) (3) (47) (25) (0) (45) (12) (77) (6) (11) (0) (11) (14) (6) (1) (55) (83) (0)
ಕೊಡಲೊಬ್ಬಳು ಸತಿಯು | ನೋಡಲೊಬ್ಬ ನೆಂಟ | ಬೇಡಿದ್ದನ್ನು ಕೊಡುವ ನೃಪತಿಯು ಭಕ್ತಿಯನು | ಮಾಡಿದರಿಗುಂಟು ಸರ್ವಜ್ಞ ||
--------------
ಸರ್ವಜ್ಞ
ಕೊಂದು ತಿನ್ನುವ ಕಂದ | ಕೊಂದನೆಂದೆನಬೇಡ | ನೊಂದಂತೆ ನೋವರಿಯದಾ ನರರಂದು | ಕೊಂದಿಹುದೆ ನಿಜವು ಸರ್ವಜ್ಞ ||
--------------
ಸರ್ವಜ್ಞ
ಕೊಂಬುವನು ಸಾಲವನು | ಉಂಬುವನು ಲೇಸಾಗಿ | ಬೆಂಬಲವ ಪಿಡಿದು - ಬಂದರಾದೇಗುಲದ | ಕಂಬದಂತಿಹನು ಸರ್ವಜ್ಞ ||
--------------
ಸರ್ವಜ್ಞ
ಕೊಲು ಧರ್ಮಗಳ - ನೊಯ್ದು | ಒಲೆಯೊಳಗೆ ಇಕ್ಕುವಾ | ಕೊಲಲಾಗದೆಂಬ ಜೈನನಾ ಮತವೆನ್ನ | ತಲೆಯ ಮೇಲಿರಲಿ ಸರ್ವಜ್ಞ ||
--------------
ಸರ್ವಜ್ಞ
ಕೊಲ್ಲದಿರ್ಪಾಧರ್ಮ | ವೆಲ್ಲರಿಗೆ ಸಮ್ಮತವು | ಅಲ್ಲದನು ಮೀರಿ ಕೊಲ್ಲುವನು ನರಕಕ್ಕೆ | ನಿಲ್ಲದಲೆ ಹೋದ ಸರ್ವಜ್ಞ ||
--------------
ಸರ್ವಜ್ಞ
ಕೋಟಿ ವಿದ್ಯೆಗಳಲ್ಲಿ | ಮೇಟಿ ವಿದ್ಯೆಯೇ ಮೇಲು | ಮೇಟಿಯಿಂ ರಾಟಿ ನಡೆದುದಲ್ಲದೆ ದೇಶ | ದಾಟವೇ ಕೆಡಕು | ಸರ್ವಜ್ಞ ||
--------------
ಸರ್ವಜ್ಞ
ಕೋಡಗನ ಒಡನಾಟ | ಕೇಡಕ್ಕು ಸಂಸಾರ | ಕಾದಾಡಿ ಕೆಂಪು ಮಾಣಿಕವ ಕಲ್ಲೆಂದು | ಈಡಾಡಿದಂತೆ ಸರ್ವಜ್ಞ ||
--------------
ಸರ್ವಜ್ಞ
ಕೋಪಕ್ಕ್ ಯಮರಜಬ್ | ಪಾಪಕ್ಕ್ ಜವರಾಜ | ಕೋಪ ಪಾಪಗಳ ಆಳಿದಂಗೆ ತಾ | ಕೊಪನಾಗಿಹನು ಸರ್ವಜ್ನ್ಯ ||
--------------
ಸರ್ವಜ್ಞ
ಕೋಳಿಕೂಗದಮುನ್ನ | ಏಳುವದು ನಿತ್ಯದಲಿ | ಬಾಳ ಲೋಚನನ ಭಕ್ತಿಯಿಂ ನೆನೆದರೆ | ಸರ್ವಜ್ಞ ||
--------------
ಸರ್ವಜ್ಞ
ಕೋಳಿಗಳ ಹಂದಿಗಳ | ಮೇಳದಲಿ ತಾ ಸಾಕಿ | ಏಳುತಲೆ ಕರೆದು ಬಡಿತಿಂದ ಪಾಪಿಗಳ | ಬಾಳೆಲ್ಲ ನರಕ ಸರ್ವಜ್ಞ ||
--------------
ಸರ್ವಜ್ಞ
ಕ್ಷೀರದಲಿ ಘ್ರತ ವಿಮಲ | ನೀರಿನೊಳು ಶಿಖಿಯಿರ್ದು ಅರಿಗೂ ತೋರದಿರದಂತೆ ಎನ್ನೊಳಗೆ | ಸೇರಿಹನು ಶಿವನು ಸರ್ವಜ್ಞ ||
--------------
ಸರ್ವಜ್ಞ
ಕ್ಷೀರದೊಳು ಘೃತವಿದ್ದು | ನೀರೊಳು ಶಿಖಿಯಿದ್ದು ಆರಿಗೆಯು ತೋರಿದಿಹುದಂತೆ - ಎನ್ನೊಳಗೆ ಸಾರಿಹನು ಸಿವನು ಸರ್ವಜ್ಞ
--------------
ಸರ್ವಜ್ಞ