ಪ್ರಾರಂಭ ಪದದ ಹುಡುಕು
ತೊತ್ತಿನಲಿ ಗುಣವಿಲ್ಲ | ಕತ್ತೆಗಂ ಕೋಡಿಲ್ಲ ಬತ್ತಲಿದ್ದವಗೆ ಭಯವಿಲ್ಲ ಕೊಂಡೆಯರೊಳು | ತ್ತಮರೆ ಇಲ್ಲ ಸರ್ವಜ್ಞ ||
ತೋಟ ಬೆಳೆಯನ್ನು | ದಾಟಿ ನೋಡದವರಾರು | ಮೀಟು ಜವ್ವನದ ಸೊಬಗೆಯ ನೆರೆ ಕಂಡು | ದಾಟದವರಾರು ಸರ್ವಜ್ಞ ||
ತೋಡಿದ್ದ ಬಾವಿಂಗೆ | ಕೂಡಿದ್ದ ಜಲ ಸಾಕ್ಷಿ | ಮಾಡಿರ್‍ದಕೆಲ್ಲ ಮನಸಾಕ್ಷಿ ಸರ್ವಕ್ಕು | ಮೃಢನೆ ತಾ ಸಾಕ್ಷಿ ಸರ್ವಜ್ಞ ||