ಪ್ರಾರಂಭ ಪದದ ಹುಡುಕು
ತಾಪದ ಸಂಸಾರ | ಕೊಪದಲಿ ಬಿಳ್ದವರು ಆಪತ್ತನುಳಿದು ಪೊರಮಡಲು - ಗುರುಪಾದ ಸೋಪಾನ ಕಂಡು ಸರ್ವಜ್ಞ
ತಾಯ ಮುಂದಣ ಶಿಶುವ | ತಾಯಗನಲಿ ಕೊಲುವ | ಸಾಯಲದರಮ್ಮನನು ಕೊಲುವನುಂ ತನ್ನ | ತಾಯ ಕೊಂದಂತೆ ಸರ್ವಜ್ಞ ||
ತಿಟ್ಟಿಯೊಳು ತೆವರದೊಳು | ಹುಟ್ಟಿಹನೆ ಪರಶಿವನು | ಹುಟ್ಟು ಸಾವುಗಳು ಅವಗಿಲ್ಲ ಜಗವನ್ನು | ಬಿಟ್ಟಿಹನು ನೋಡು ಸರ್ವಜ್ಞ ||
ತಿತ್ತಿ ಹೊಟ್ಟೆಗೆ ಒಂದು | ತುತ್ತು ತಾ ಹಾಕುವದು | ತುತ್ತೆಂಬ ಶಿವನ ಬಿಟ್ಟಿಹರೆ ಸುಡುಗಾಡಿ | ಗೆತ್ತಬೇಕೆಂದ ಸರ್ವಜ್ಞ ||
ತಿಂದು ಗಾದಿಯ ಮೇಲೆ | ಬಂದು ಗುರು ಬೀಳ್ವಂತೆ | ಬಂದ ಪ್ರಸ್ತಾಪಕೊದಗಿದರೆ ಆ ಮಾತು | ನೊಂದೆನ್ನಬಹುದೆ ಸರ್ವಜ್ಞ ||
ತುತ್ತು ತುತ್ತಿಗೆ ಹೊಟ್ಟೆ | ತಿತ್ತಿಯಂತಾಗುವದು | ತುತ್ತು ಅರಗಳಿಗೆ ತಡೆದಿಹರೆ ಹೆಡೆಹಾವು ಹುತ್ತು ಬಿಟ್ಟಂತೆ ಸರ್ವಜ್ಞ ||
ತುಪ್ಪ ಒಗರ ಲೇಸು | ಉಪ್ಪರಿಗೆ ಮನೆ ಲೇಸು | ಅಪ್ಪ ಬಾರೆಂಬ ಮಗ ಲೇಸು ಊರೊಳಗೆ | ಶಿಂಪಿಗನು ಲೇಸು | ಸರ್ವಜ್ಞ ||
ತುಪ್ಪವಾದಾ ಬಳಿಕ | ಹೆಪ್ಪನೆರೆದವರುಂಟೆ ನಿಃಪತಿಯಾದ ಗುರುವಿನುಪದೇಶದಿಂ ತಪ್ಪದೇ ಮುಕ್ತಿ ಸರ್ವಜ್ಞ
ತುಂಬಿದಾ ಕೆರೆ ಭಾವಿ | ತುಂಬಿದಂತಿರುವದೇ | ನಂಬಿರಲು ಬೇಡ ಲಕ್ಶ್ಮಿಯನು ಬಡತನವು | ಬೆಂಬಿಡದೆ ಬಹುದು ಸರ್ವಜ್ಞ ||
ತುರುಕನಾ ನೆರೆ ಹೊಲ್ಲ | ಹರದನಾ ಕೆಳ ಹೊಲ್ಲ | ತಿರಿಗೊಳನಟ್ಟು ಉಣಹೊಲ್ಲ | ಪರಸ್ತ್ರೀಯ ಸರಸವೇ ಹೊಲ್ಲ | ಸರ್ವಜ್ಞ ||
ತುಲವನೇರಲು ಗುರುವು | ನೆಲೆಯಾಗಿ ಮಳೆಯಕ್ಕು ಫಲವು ಧಾನ್ಯಗಳು ಬೆಳೆಯಕ್ಕು ಪ್ರಜೆಗಳಿಗೆ | ನಿಲಕಾಲಕ್ಕು ಸರ್ವಜ್ಞ ||
ತೆಂಕಣಕೆ ಮುಗಿಲಡರಿ | ಶಂಕರನೆ ದೆಶ ಮಿಂಚೆ | ಪಂಕಜಾರಾತ ಗುಡಿಗೆಟ್ಟ ಮಳೆಯು ತಾ | ಭೋಂಕನೇ ಬಕ್ಕು ಸರ್ವಜ್ಞ ||
ತೆಗೆದತ್ತಿಳೀಯುವದು | ಮಿಗಿಲೆತ್ತರೇರಿಹುದು | ಬಗೆಯ ರಸತುಂಬಬಹು ಸಂಚದ ತ್ರಾಸ | ನಗೆಹಲೇ ಬೇಡ ಸರ್ವಜ್ಞ ||
ತೆಪ್ಪವನ್ನು ನಂಬಿದಡೆ | ತಪ್ಪದಲೆ ತಡಗಹದು | ಸರ್ಪಭೂಷಣನ ನಂಬಿದಡೆ ಭವಪಾಶ | ತಪ್ಪಿ ಹೋಗುವುದು ಸರ್ವಜ್ಞ ||
ತೆರೆದ ಹಸ್ತವು ಲೇಸು | ಹರಿಯ ಪೂಜ್ಯವು ಲೇಸು | ಅರ ಸೊಲಿಮೇ ಲೇಸು ಸರ್ವಕ್ಕೂ ಶಿವನಿಗೆ | ಶರಣನೇ ಲೇಸು ಸರ್ವಜ್ಞ ||