ಪ್ರಾರಂಭ ಪದದ ಹುಡುಕು
ಜೋಳವಾಳಿಯು ಹೊಲ್ಲ ಕೀಳಿನೊಳ ಇರಹೊಲ್ಲ | ಹೇಳದೌತನಕ್ಕೆ ಬರಹೊಲ್ಲ ಕೊಂಡೆಯನ | ಗಾಳಿಯೇ ಹೊಲ್ಲ ಸರ್ವಜ್ಞ ||
ಜ್ಞಾದಿಂದಲಿ ಇಹವು | ಜ್ಞಾನದಿಂದಲಿ ಪರವು | ಜ್ಞಾನವಿಲ್ಲದಲೆ ಸಕಲವೂ ತನಗಿದ್ದು | ಹಾನಿ ಕಾಣಯ್ಯ ಸರ್ವಜ್ಞ ||
ಜ್ಞಾನದಿಂ ಮೇಲಿಲ್ಲ | ಶ್ವಾನನಿಂ ಕೀಳಿಲ್ಲ | ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ | ಜ್ಞಾನವೇ ಮೇಲು ಸರ್ವಜ್ಞ ||
ಜ್ಞಾನಿಯಜ್ಞಾನೆಂದು | ಹೀನ ಜರಿದರೇನು | ಶ್ವಾನ ತಾ ಬೊಗಳುತಿರಲಾನೆಯದನೊಂದು | ಗಾನವೆಂದಂತೆ ಸರ್ವಜ್ಞ ||
ಜ್ಯೋತಿಯಿಂದವೆ ನೇತ್ರ | ರಾತ್ರಿಯಲಿ ಕಾಂಬಂತೆ ಸೂತ್ರದಲಿ ಧಾತನರೆವಂತೆ - ಶಿವನ ಗುರು ನಾಥನಿಂದರಿಗು ಸರ್ವಜ್ಞ
ಜ್ಯೋತಿಯಿಲ್ಲದ ಮನೆಯು | ರೀತಿಯಿಲ್ಲದ ಸತಿಯು ನಿತಿಯಿಲ್ಲದಾ ವಿಪ್ರನುಂ ಭಿಕ್ಷದಾ | ಪಾತ್ರೆಯೊಡೆದಂತೆ ಸರ್ವಜ್ಞ ||
ಜ್ವರ ಬನ್ದ ಮನುಜಂಗೆ | ನೊರೆವಾಲು ವಿಷಕ್ಕು | ನರಕದಲಿ ಬೀಳ್ವ ಅಧಮಂಗ ಶಿವಭಕ್ತಿ | ಹಿರಿದು ವಿಷಪಕ್ಕು ಸರ್ವಜ್ಞ ||