ಒಟ್ಟು 26 ಕಡೆಗಳಲ್ಲಿ , 1 ವಚನಕಾರರು , 26 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಗಿಯ ಹುಣ್ಣಿವೆ ಹೋದ | ಮಿಗೆ ಮೂರ ದಿವಸಕ್ಕೆ | ಮೃಗಧರನ ಕೂಡೆ ಮೃಗವಿರಲು ಮಳೆಗಾಲ | ಜಗದಣಿಯಲಕ್ಕು ಸರ್ವಜ್ಞ ||
--------------
ಸರ್ವಜ್ಞ
ಆಡುವವ ಕೆಟ್ಟಂತೆ | ನೋಡಹೋದವ ಕೆಟ್ಟ | ಬೇದುವವ ಕೆಟ್ಟ ನೆತ್ತವನು ಆಡುವನ | ಕೂಡಿದವ ಕೆಟ್ಟ ಸರ್ವಜ್ಞ ||
--------------
ಸರ್ವಜ್ಞ
ಆಳಾಗಬಲ್ಲವನು | ಆಳುವನು ಅರಸಾಗಿ | ಆಳಾಗಿ ಬಾಳಲರೆಯದವ ಕಡೆಯಲ್ಲಿ | ಹಾಳಾಗಿ ಹೋದ ಸರ್ವಜ್ಞ ||
--------------
ಸರ್ವಜ್ಞ
ಈಶ ಭಕ್ತನು ಆಗಿ | ವೇಶಿಯನು ತಾ ಹೋಗೆ | ಸಲಾಗಿರ್ದ ಭೋನವನು ಹಂದಿ ತಾ ಮೂಸಿ ಹೋದಂತೆ ಸರ್ವಜ್ಞ ||
--------------
ಸರ್ವಜ್ಞ
ಉದ್ಯೋಗವಿಲ್ಲದವನು | ಬಿದ್ದಲ್ಲಿ ಬಿದ್ದಿರನು | ಹದ್ದುನೆವನವನು ಈಡಾಡಿ ಹಾವ ಕೊಂ | ಡೆದ್ದು ಹೋದಂತೆ ಸರ್ವಜ್ಞ ||
--------------
ಸರ್ವಜ್ಞ
ಎಂಟು ಹಣವುಳ್ಳ ತನಕ | ಬಂಟನಂತಿರುತಿಕ್ಕು | ಎಂಟು ಹಣ ಹೋದ ಮರುದಿನವೆ ಹುಳುತಿಂದ | ದಂತಿನಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ಎತ್ತ ಹೋದರು ಒಂದು | ತುತ್ತು ಕಟ್ಟಿರಬೇಕು | ತುತ್ತೊಂದು ಗಳಿಗೆ ತಡೆದಿಹರೆ ಕೈ ಹಿಡಿದು | ಎತ್ತಬೇಕೆಂದ ಸರ್ವಜ್ಞ ||
--------------
ಸರ್ವಜ್ಞ
ಎತ್ತ ಹೋದರೂ ಮನವ | ಹತ್ತಿಕೊಂಡೇ ಬಹುದು | ಮತ್ತೊಬ್ಬ ಸೆಳೆದುಕೊಳಲರಿಯದಾ | ಜ್ಞಾನದಾ | ಬಿತ್ತು ಲೇಸೆಂದು ಸರ್ವಜ್ಞ ||
--------------
ಸರ್ವಜ್ಞ
ಏನು ಮನ್ನಿಸದಿರಲು | ಸೀನು ಮನ್ನಿಸಬೇಕು | ಸೀನು ಮನ್ನಿಸದೆ ಹೋಗಿಹರೆ ಹೋದಲ್ಲಿ | ಹಾನಿಯೇ ಬಕ್ಕು ಸರ್ವಜ್ಞ ||
--------------
ಸರ್ವಜ್ಞ
ಕಣ್ಣುಗಳು ಇಳಿಯುವವು | ಬಣ್ಣಗಳು ಅಳಿಯುವವು | ಹುಣ್ಣಿಮೆಯು ಹೋದ ಶಶಿಯಂತೆ ಅಶನವನು | ಉಣ್ಣದವ ನೋಡಲು ಸರ್ವಜ್ಞ ||
--------------
ಸರ್ವಜ್ಞ
ಕಾದ ಕಬ್ಬುನವು ತಾ | ಹೊಯ್ದೊಡನೆ ಕೂಡುವದು | ಹೋದಲ್ಲಿ ಮಾತು ಮರೆದರಾ ಕಬ್ಬುನವು | ಕಾದಾರಿದಂತೆ ಸರ್ವಜ್ಞ ||
--------------
ಸರ್ವಜ್ಞ
ಕಿರಿಯಂದಿನಾ ಪಾಪ | ನೆರೆ ಬಂದು ಹೋದೀತೆ | ಅರವಿಂಗೆ ಹಿರಿದು ಕಿರಿದಿಲ್ಲ ಇದನು ನೀ | ನರಿದು ನೋಡೆಂದ ಸರ್ವಜ್ಞ ||
--------------
ಸರ್ವಜ್ಞ
ಕೊಲ್ಲದಿರ್ಪಾಧರ್ಮ | ವೆಲ್ಲರಿಗೆ ಸಮ್ಮತವು | ಅಲ್ಲದನು ಮೀರಿ ಕೊಲ್ಲುವನು ನರಕಕ್ಕೆ | ನಿಲ್ಲದಲೆ ಹೋದ ಸರ್ವಜ್ಞ ||
--------------
ಸರ್ವಜ್ಞ
ದಂಡು ಇಲ್ಲದ ಅರಸು | ಕುಂಡವಿಲ್ಲದ ಹೋಮ | ಬಂಡಿಯಿಲ್ಲದನ ಬೇಸಾಯ ತಲೆಹೋದ | ಮುಡದಂತಿಕ್ಕು ಸರ್ವಜ್ಞ ||
--------------
ಸರ್ವಜ್ಞ
ಧನಕನಕವುಳ್ಳವನ-ದಿನಕರನ ವೋಲಕ್ಕು | ಧನಕನಕ ಹೋದ ಮರುದಿನವೆ ಹಾಳೂರು ಶುನಕನಂತಕ್ಕು ಸರ್ವಜ್ಞ ||
--------------
ಸರ್ವಜ್ಞ