ಒಟ್ಟು 15 ಕಡೆಗಳಲ್ಲಿ , 1 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉತ್ತಮರು ಪಾಲ್ಗೊಡಲೊ | ಳೆತ್ತಿದರೆ ಜನ್ಮವನು | ಉತ್ತಮರು ಅಧಮರೆನಬೇಡಿ ಹೊಲೆಯಿಲ್ಲ | ದುತ್ತಮರು ಎಲ್ಲಿ ಸರ್ವಜ್ಞ ||
--------------
ಸರ್ವಜ್ಞ
ಎಲುವು - ತೊಗಲ್ - ನರ - ಮಾಂಸ | ಬಲಿದ ಚರ್ಮದ ಹೊದಿಕೆ | ಹೊಲೆ - ರಕ್ತ ಶುಕ್ಲದಿಂದಾದ ದೇಹಕ್ಕೆ | ಕುಲವಾವುದಯ್ಯ ಸರ್ವಜ್ಞ ||
--------------
ಸರ್ವಜ್ಞ
ಕುಲವನ್ನು ಕೆಡಿಸುವದು | ಛಲವನ್ನು ಬಿಡಿಸುವದು | ಹೊಲೆಯನಾ ಮನೆಯ ಹೊಗಿಸುವದು ಕೂಳಿನಾ | ಬಲವ ನೋಡೆಂದ ಸರ್ವಜ್ಞ ||
--------------
ಸರ್ವಜ್ಞ
ಕೆಟ್ಟಹಾಲಿಂದ ಹುಳಿ | ಯಿಟ್ಟಿರ್ದ ತಿಳಿಲೇಸು | ಕೆಟ್ಟ ಹಾರುವವನ ಬದುಕಿಂದ ಹೊಲೆಯನು | ನೆಟ್ಟನೇ ಲೇಸು ಸರ್ವಜ್ಞ ||
--------------
ಸರ್ವಜ್ಞ
ನಲ್ಲೆಯನು ಒಲ್ಲೆಂಬ | ಸೊಲ್ಲು ನಾಲಿಗೆ ಹೊಲೆಯು | ಬಲ್ಲಿದನು ಶ್ರವಣ ಸನ್ಯಾಸಿ ಇವರುಗಳು | ಎಲ್ಲಿ ಉದಿಸಿಹರು ಸರ್ವಜ್ಞ ||
--------------
ಸರ್ವಜ್ಞ
ಪಕ್ಕಲೆಯ ಸಗ್ಗಲೆಯೊ | ಳಿಕ್ಕಿರ್ದ ವಾರಿಯನು | ಚೊಕ್ಕಟವು ಎಂದು ಕುಡಿಯುತಿರೆ ಹೊಲೆಯರು | ಚಿಕ್ಕವರು ಹೇಗೆ ಸರ್ವಜ್ಞ ||
--------------
ಸರ್ವಜ್ಞ
ಮಲವು ದೇಹದಿ ಸೋರಿ | ಹೊಲಸು ಮಾಂಸದಿ ನಾರಿ | ಹೊಲೆ ವಿಲದ ಹೇಯ ದೇಹದಲಿ ಹಾರುವರು | ಕುಲವನೆಣಿಸುವರೆ ಸರ್ವಜ್ಞ ||
--------------
ಸರ್ವಜ್ಞ
ಮುಟ್ಟಾದ ಹೊಲೆಯೊಳಗೆ | ಹುಟ್ಟುವುದು ಜಗವೆಲ್ಲ | ಮುಟ್ಟಬೇಡೆಂದ ತೊಲಗುವಾ ಹಾರುವನು | ಹುಟ್ಟಿರುವನೆಲ್ಲಿ ಸರ್ವಜ್ಞ ||
--------------
ಸರ್ವಜ್ಞ
ಸತ್ತಕತ್ತೆಯ ಹೊತ್ತ | ಕೆತ್ತಣದ ಹೊಲೆಯನವ | ಉತ್ತಮನು ಎಂದು ಹೆರರೊಡನೆ ಹೊತ್ತವನೆ | ನಿತ್ಯವೂ ಹೊಲೆಯ ಸರ್ವಜ್ಞ ||
--------------
ಸರ್ವಜ್ಞ
ಸತ್ತುದನು ತಿಂಬಾತ | ಎತ್ತಣದ ಹೊಲೆಯನವ | ಒತ್ತಿ ಜೀವದೆ ಕೊರಳಿರಿದು ತಿಂಬಾತ | ಉತ್ತಮದ ಹೊಲೆಯ ಸರ್ವಜ್ಞ ||
--------------
ಸರ್ವಜ್ಞ
ಹೆಂಡಕ್ಕೆ ಹೊಲೆಯ ತಾ | ಕಂಡಕ್ಕೆ ಕಟುಗ ತಾ | ದಂಡಕ್ಕೆ ಕೃಷಿಕ ಹಾರುವನು ತಾ ಪಿಂಡಕ್ಕೆ ಇಡುವ ಸರ್ವಜ್ಞ ||
--------------
ಸರ್ವಜ್ಞ
ಹೊಲಸು ಮಾಂಸದ ಹುತ್ತ | ಎಲುವಿನ ಹಂಜರವು ಹೊಲೆ ಬಲಿದು ತನುವಿನೊಳಗಿರ್ದು - ಮತ್ತದರಿ ಕುಲವನೆಣೆಸುವರೆ ಸರ್ವಜ್ಞ
--------------
ಸರ್ವಜ್ಞ
ಹೊಲಿಯ ಮಾದಿಗರುಂಡು | ಸುಲಿದಿಟ್ಟ ತೊಗಲು ಸಲೆ | ಕುಲಜರೆಂಬವರಿಗುಣಲಾಯ್ತು | ಹೊಲೆಯರಾ | ಕುಲವಾವುದಯ್ಯ ಸರ್ವಜ್ಞ ||
--------------
ಸರ್ವಜ್ಞ