ಒಟ್ಟು 8 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿತವರ ಮುಂದೆ ತ | ನ್ನರಿವನ್ನು ಮೆರೆಯುವದು | ಅರಿಯದನ ಮುಂದೆ ಮೆರೆದರಾ ಹೊನ್ನೆಂಬ | ತೊರೆಯ ಲೆಚ್ಚಂತೆ ಸರ್ವಜ್ಞ ||
--------------
ಸರ್ವಜ್ಞ
ಎಣ್ಣೆಯ ಋಣವು | ಅನ್ನ- ವಸ್ತ್ರದ ಋಣವು | ಹೊನ್ನು ಹೆಣ್ಣಿನಾ ಋಣವು ತೀರಿದ ಕ್ಷಣದಿ | ಮಣ್ಣು ಪಾಲೆಂದು ಸರ್ವಜ್ನ್ಯ ||
--------------
ಸರ್ವಜ್ಞ
ಪುಣ್ಯತನಗುಳ್ಳ ನರ | ಮನ್ನಣೆಯು ಪಿರಿದಕ್ಕು | ಹಣ್ಣಿರ್ದ ಕಾರ್ಯ - ಫಲವಕ್ಕು ಹಿಡಿದಿರ್ದ | ಮಣ್ಣು ಹೊನ್ನಕ್ಕು ಸರ್ವಜ್ಞ ||
--------------
ಸರ್ವಜ್ಞ
ಮಣ್ಣು ಬಿಟ್ಟವ ದೈವ | ಹೊನ್ನು ಬಿಟ್ಟವ ದೈವ | ಹೆಣ್ಣ ನೆರೆ ಬಿಟ್ಟರವ ದೈವ ಜಗಕೆ ಮು | ಕ್ಕಣ್ಣನೇ ದೈವ ಸರ್ವಜ್ಞ ||
--------------
ಸರ್ವಜ್ಞ
ಮುನ್ನ ಮಾಡಿದ ಪಾಪ | ಹೊನ್ನಿನಿಂ ಪೋಪುದೇ ? ಹೊನ್ನಿನಾ ಪುಣ್ಯವದು ಬೇರೆ; ಪಾಪ ತಾ | ಮುನ್ನಿನಂತಿಹುದು ಸರ್ವಜ್ಞ ||
--------------
ಸರ್ವಜ್ಞ
ಯತಿಗಳಿಗೆ ಮತೆಗೆಡಗು | ಸತಿಯ ಸಜ್ಜನ ಕೆಡಗು | ಮತಿವಂತರೆಲ್ಲ ಭ್ರಮೆಗೊಳಗು ಹೊನ್ನ ಶ್ರುತಿಯ ಕೇಳಿದರೆ ಸರ್ವಜ್ಞ ||
--------------
ಸರ್ವಜ್ಞ
ಹೆಣ್ಣನ್ನು ಹೊನ್ನನ್ನು | ಹಣ್ಣಾದ ಮರಗಳನ್ನು | ಕಣ್ಣಿಂದ ಕಂಡು ಮನದಲ್ಲಿ ಬಯಸದಿಹ | ಅಣ್ಣಗಳು ಯಾರು ಸರ್ವಜ್ಞ ||
--------------
ಸರ್ವಜ್ಞ