ಒಟ್ಟು 8 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಟ್ಟಿ ಹರಿದಾಡುವದು | ಬಟ್ಟೆಯಲಿ ಮೆರೆಯುವದು | ಹೊಟ್ಟೆ ಹುಣ್ಣಾಗಿ ನಗಿಸುವದು ಒಂದು ಹಿಡಿ ಹಿಟ್ಟು | ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ
ಕೊಟ್ಟಣವ ಕುಟ್ಟುವದು | ಮೊಟ್ಟೆಯದು ಹೊರಿಸುವದು | ಬಿಟ್ಟ-ಕೂಲಿಗಳ ಮಾಡಿಸುವದು ಗೇಣು | ಹೊಟ್ಟೆ ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ
ತಿತ್ತಿ ಹೊಟ್ಟೆಗೆ ಒಂದು | ತುತ್ತು ತಾ ಹಾಕುವದು | ತುತ್ತೆಂಬ ಶಿವನ ಬಿಟ್ಟಿಹರೆ ಸುಡುಗಾಡಿ | ಗೆತ್ತಬೇಕೆಂದ ಸರ್ವಜ್ಞ ||
--------------
ಸರ್ವಜ್ಞ
ತುತ್ತು ತುತ್ತಿಗೆ ಹೊಟ್ಟೆ | ತಿತ್ತಿಯಂತಾಗುವದು | ತುತ್ತು ಅರಗಳಿಗೆ ತಡೆದಿಹರೆ ಹೆಡೆಹಾವು ಹುತ್ತು ಬಿಟ್ಟಂತೆ ಸರ್ವಜ್ಞ ||
--------------
ಸರ್ವಜ್ಞ
ಬಟ್ಟೆ ಬಟ್ಟೆಯೊಳೆಲ್ಲ | ಹೊಟ್ಟೆ ಜಾಲಿಯ ಮುಳ್ಳು | ಹುಟ್ಟಿದವರೆಲ್ಲ ನಿಜವಾಯಿ ಮೂಡಲ | ಬಟ್ಟೆ ಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಹೊಟ್ಟೆಗುಣ ಕೊಟ್ಟವಗೆ | ಸಿಟ್ಟು ನೆರೆ ಬಿಟ್ಟವಗೆ | ಬಟ್ಟೆಯಾ ಮುಳ್ಳು ಸುಟ್ಟವಗೆ ಬಹು ಭವದ | ಹುಟ್ಟು ತಾನಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಹೊಟ್ಟೆಯನು ಕಳ್ಳುವದು | ಬಟ್ಟೆಯಲಿ ಬಡಿಸುವದು ಕಟ್ಟಾಳ ಭಂಗಪಡಿಸುವದು ಗೇಣುದ್ದ | ಹೊಟ್ಟೆ ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ