ಒಟ್ಟು 13 ಕಡೆಗಳಲ್ಲಿ , 1 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಣ್ಣೆಯ ಋಣವು | ಅನ್ನ- ವಸ್ತ್ರದ ಋಣವು | ಹೊನ್ನು ಹೆಣ್ಣಿನಾ ಋಣವು ತೀರಿದ ಕ್ಷಣದಿ | ಮಣ್ಣು ಪಾಲೆಂದು ಸರ್ವಜ್ನ್ಯ ||
--------------
ಸರ್ವಜ್ಞ
ಕರಿಕೆ ಕುದುರೆಗೆ ಲೇಸು | ಮುರಕವು ಹೆಣ್ಣಿಗೆ ಲೇಸು | ಅರಿಕೆಯುಳ್ಳವರ ಕೆಳೆಲೇಸು ಪಶುವಿಂಗೆ | ಗೊರೆಸುಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ಮಣ್ಣು ಬಿಟ್ಟವ ದೈವ | ಹೊನ್ನು ಬಿಟ್ಟವ ದೈವ | ಹೆಣ್ಣ ನೆರೆ ಬಿಟ್ಟರವ ದೈವ ಜಗಕೆ ಮು | ಕ್ಕಣ್ಣನೇ ದೈವ ಸರ್ವಜ್ಞ ||
--------------
ಸರ್ವಜ್ಞ
ಸೀತೆಯಿಂ ಹೆಣ್ಣಿಲ್ಲ | ಸೂತನಿಂದಾಳಿಲ್ಲ | ಮಾತಿನಲಿ ಸೋತಗಿದಿರಿಲ್ಲ ಶೂದ್ರಂಗೆ | ಭೀತಿಯೇ ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ಹಸಿಯ ಅಲ್ಲವು ಲೇಸು | ಬಿಳಿಯ ಪಳಿಯು ಲೇಸು ಹುಸಿ ಲೇಸು ಕಳ್ಳಹೆಣ್ಣಿಗೆ | ಬೈಗಿನಾ ಬಿಸಿಲು ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ಹೆಣ್ಣನ್ನು ಹೊನ್ನನ್ನು | ಹಣ್ಣಾದ ಮರಗಳನ್ನು | ಕಣ್ಣಿಂದ ಕಂಡು ಮನದಲ್ಲಿ ಬಯಸದಿಹ | ಅಣ್ಣಗಳು ಯಾರು ಸರ್ವಜ್ಞ ||
--------------
ಸರ್ವಜ್ಞ
ಹೆಣ್ಣಿಗೂ ಮಣ್ಣಿಗೂ ಉಣ್ಣುದುರಿಯಲುಬೇಡ | ಹೆಣ್ಣಿನಿಂದ ಕೆಟ್ಟ ದಶಕಂಠ ಕೌರವನು | ಮಣ್ಣಿಂದ ಕೆಡನೆ ಸರ್ವಜ್ಞ ||
--------------
ಸರ್ವಜ್ಞ
ಹೆಣ್ಣಿನಾ ಹೃದಯದಾ | ತಣ್ಣಗಿಹ ನೀರಿನಾ | ಬಣ್ಣಿಸುತ ಕುಣಿವ ಕುದುರೆಯಾ ನೆಲೆಯ ಬ | ಲ್ಲಣ್ಣಗಳು ಯಾರು ಸರ್ವಜ್ಞ ||
--------------
ಸರ್ವಜ್ಞ
ಹೆಣ್ಣಿನಿಂದಲೆ ಇಹವು | ಹೆಣ್ಣಿನಿಂದಲೆ ಪರವು | ಹೆಣ್ಣಿಂದ ಸಕಲಸಂಪದವು ಹೆಣ್ಣೊಲ್ಲ | ದಣ್ಣಗಳು ಯಾರು ಸರ್ವಜ್ಞ ||
--------------
ಸರ್ವಜ್ಞ