ಒಟ್ಟು 15 ಕಡೆಗಳಲ್ಲಿ , 1 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ಬಲ್ಲರೆ ಕಾಯಿ | ಮುನ್ನಾರಾ ಅರವತ್ತು | ಹಣ್ಣು ಹನ್ನೆರಡು ಗೊನೆ ಮೂರು ತೊಟ್ಟೊಂದು | ಚನ್ನಾಗಿ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಎಂಟು ಹಣವುಳ್ಳ ತನಕ | ಬಂಟನಂತಿರುತಿಕ್ಕು | ಎಂಟು ಹಣ ಹೋದ ಮರುದಿನವೆ ಹುಳುತಿಂದ | ದಂತಿನಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ಕಣ್ಣು ಸಣ್ಣದು ತಾನು | ಹಣ್ಣದಿಹುದೊಂದಿಲ್ಲ | ತಣ್ಣಗಿಹ ಮನವ ನುರಿಸುವದು ಇದನು ಕೊಕೊಂ | ದಣ್ಣಗಳು ಆರು ಸರ್ವಜ್ಞ ||
--------------
ಸರ್ವಜ್ಞ
ನಂದೆಯನು ಭದ್ರೆಯನು | ಒಂದಾಗಿ ಅರ್ಧಿಸಲು | ಅಂದಿನ ತಿಥಿಯ ಸಮನಾಗೆ ಗ್ರಹಣ ತಾ | ಮುಂದೆ ಬಂದಕ್ಕು ಸರ್ವಜ್ಞ ||
--------------
ಸರ್ವಜ್ಞ
ನಾಲ್ಕು ಹಣವುಳ್ಳತನಕ | ಪಾಲ್ಕಿಯಲಿ ಮೆರೆದಿಕ್ಕು | ನಾಲ್ಕು ಹಣ ಹೋದ ಮರುದಿನವೆ ಕೋಳದಲಿ ಸಿಲ್ಕಿದಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ನೂರು ಹಣ ಕೊಡುವನಕ | ಮೀರಿ ವಿನಯದಲಿಪ್ಪ | ನೂರರೋಳ್ಮೂರ ಕೇಳಿದರೆ ಸಾಲಿಗನು | ತೂರುಣನು ಮಣ್ಣು ಸರ್ವಜ್ಞ ||
--------------
ಸರ್ವಜ್ಞ
ಪುಣ್ಯತನಗುಳ್ಳ ನರ | ಮನ್ನಣೆಯು ಪಿರಿದಕ್ಕು | ಹಣ್ಣಿರ್ದ ಕಾರ್ಯ - ಫಲವಕ್ಕು ಹಿಡಿದಿರ್ದ | ಮಣ್ಣು ಹೊನ್ನಕ್ಕು ಸರ್ವಜ್ಞ ||
--------------
ಸರ್ವಜ್ಞ
ಸಾಲವನು ತರುವಾಗ | ಹಾಲು - ಹಣ್ಣುಂಬಂತೆ | ಸಾಲಿಗನು ಬಂದು ಎಳೆದಾಗ ಕಿಬ್ಬದಿಯ | ಕೀಲು ಮುರಿದಂತೆ ಸರ್ವಜ್ಞ ||
--------------
ಸರ್ವಜ್ಞ
ಸುರೆಯ ಸೇವಿಸುವವನ | ಸುರಿಗೆಯನು ಪಿಡಿದವನ | ದೊರೆಯೊಲುಮೆಗಾಗಿ ಹಣಗುವನಕಾಯುವದು | ಸೊರಗಿಸಾಯುವವು ಸರ್ವಜ್ಞ ||
--------------
ಸರ್ವಜ್ಞ
ಹಣ ಗುಣದಿ ಬಲವುಳ್ಳ | ಕೆಡೆಬೀಳಲಿರಿದರೂ | ನಡುವೆಂದು ಬಗೆದ ಪತಿಪ್ರತೆ ಸೀತೆಗಂ | ಎಣೆಯಾರು ಹೇಳು ಸರ್ವಜ್ಞ ||
--------------
ಸರ್ವಜ್ಞ
ಹಣತೆ ಭತ್ತವು ಅಲ್ಲ | ಅಣಬೆ ಸತ್ತಿಗೆಯಲ್ಲ | ಕಣಕದಾ ಕಲ್ಲು ಮಣಿಯಲ್ಲ ಬಣಜಿಗನು | ಗುಣವಂತನಲ್ಲ ಸರ್ವಜ್ಞ ||
--------------
ಸರ್ವಜ್ಞ
ಹಣವಿಗೊಂದು ರವಿ | ಪ್ಪಣಕೊಂದು ಬೇಳೆಯನು | ತ್ರಿಣಯನಾ ಮುಕುಟವಾದರಾ ಅಕ್ಕಸಾಲೆ | ಟೊನೆಯದೇ ಬಿಡನು ಸರ್ವಜ್ಞ ||
--------------
ಸರ್ವಜ್ಞ
ಹೆಣ್ಣನ್ನು ಹೊನ್ನನ್ನು | ಹಣ್ಣಾದ ಮರಗಳನ್ನು | ಕಣ್ಣಿಂದ ಕಂಡು ಮನದಲ್ಲಿ ಬಯಸದಿಹ | ಅಣ್ಣಗಳು ಯಾರು ಸರ್ವಜ್ಞ ||
--------------
ಸರ್ವಜ್ಞ