ಒಟ್ಟು 10 ಕಡೆಗಳಲ್ಲಿ , 1 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದ್ಯೋಗವುಳ್ಳವನ | ಹೊದ್ದುವದು ಸಿರಿ ಬಂದು | ಉದ್ಯೋಗವಿಲ್ಲದಿರುವವನು ಕರದೊಳಗೆ | ಇದ್ದರೂ ಪೋಕು ಸರ್ವಜ್ಞ ||
--------------
ಸರ್ವಜ್ಞ
ಗುರುಗಳಿಗೆ ಹಿರಿಯರಿಗೆ | ಶಿರವಾಗಿ ಎಅರಗಿದರೆ \ ನರಸುರರು ಒಲಿದು ಸಿರಿ ಸುರಿಯೆ ಕೈಲಾಸ | ಕರತಲಾಮಲಕ ಸರ್ವಜ್ಞ ||
--------------
ಸರ್ವಜ್ಞ
ಪರಸ್ತ್ರೀಯ ಗಮನದಿಂ | ಪರಲೋಕವದು ಹಾನಿ | ಸಿರಿತಗ್ಗಿ ತಲೆಯು ತೊಲಗಿತಾ ರಾವಣಗೆ | ನರಲೋಕದಲ್ಲಿ ಸರ್ವಜ್ಞ ||
--------------
ಸರ್ವಜ್ಞ
ಬರಕೆ ಬುತ್ತಿಯು ಹೊಲ್ಲ | ಸಿರಿಕಾ ಮನೆ ಹೊಲ್ಲ | ಕರೆಕರೆಯ ಕೂಳು ತಿನಹೊಲ್ಲ | ಕಜ್ಜಿಯನು ಕೆರೆಕೊಳ್ಳ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಭಂಡಗಳ ನುಡುಯುವಾ | ದಿಂಡೆಯನು ಹಿಡತಂದು ಖಂಡಿಸಿರಿ ಎಂದವನೊಡನೆ ಹಿಂಡೆಲ್ಲ | ಬಂದಿಹುದು ನೋಡು ಸರ್ವಜ್ಞ ||
--------------
ಸರ್ವಜ್ಞ
ಸಿರಿಯ ಸಂಸಾರವು | ಸ್ಥಿರವೆಂದು ನಂಬದಿರು | ಹಿರಿದೊಂದು ಸಂತೆ ನೆರೆದೊಂದು ಜಾವಕ್ಕೆ | ಹರಿದು ಹೋದಂತೆ ಸರ್ವಜ್ಞ ||
--------------
ಸರ್ವಜ್ಞ
ಸಿರಿಯಣ್ಣನುಳ್ಳತನಕ | ಹಿರಿಯಣ್ಣ ನೆನೆಸಿಪ್ಪ | ಸಿರಿಯಣ್ಣ ಹೋದ ಮರುದಿನವೆ ಹಿರಿಯಣ್ಣ | ನರಿಯಣ್ಣನೆಂದ ಸರ್ವಜ್ಞ ||
--------------
ಸರ್ವಜ್ಞ
ಸುರೆಯ ಸೇವಿಸುವಂಗೆ | ಸಿರಿಗರ್ವಪಚನಂಗೆ | ದೊರೆಯಲ್ಲಿ ತೇಜ ಪಡೆದಂಗೆ ಶಿರವಿಹುದು | ಸ್ಥಿರವಲ್ಲ ನೋಡ ಸರ್ವಜ್ಞ ||
--------------
ಸರ್ವಜ್ಞ
ಹೆರೆಗಳೆಡೆ ಉರಗನನಾ | ಗರಳ ತಾ ತಪ್ಪುವದೆ | ಪರತತ್ವಬೋಧೆಯನರಿಯದಾ ಶ್ರವಣರು | ಸಿರಿಯ ತೊರೆದರೇನು ಸರ್ವಜ್ಞ ||
--------------
ಸರ್ವಜ್ಞ