ಒಟ್ಟು 6 ಕಡೆಗಳಲ್ಲಿ , 1 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಡತಂದೆನಲ್ಲದೇ | ಹಿಡಿ ಕಳವ ಕದ್ದೆನೇ | ತಡವಲುರೆ ಬೈದು ತೆಗೆದಾನು ಸಾಲಿಗನು | ನಡುವೆ ಜಗಳವನು ಸರ್ವಜ್ಞ ||
--------------
ಸರ್ವಜ್ಞ
ನೂರು ಹಣ ಕೊಡುವನಕ | ಮೀರಿ ವಿನಯದಲಿಪ್ಪ | ನೂರರೋಳ್ಮೂರ ಕೇಳಿದರೆ ಸಾಲಿಗನು | ತೂರುಣನು ಮಣ್ಣು ಸರ್ವಜ್ಞ ||
--------------
ಸರ್ವಜ್ಞ
ಬೆಂಡಿರದೆ ಮುಳುಗಿದರೂ | ಗುಂಡೆದ್ದು ತೇಲಿದರೂ | ಬಂಡಿಯ ನೊಗವು ಚಿಗಿತರೂ ಸಾಲಿಗನು | ಕೊಂಡದ್ದು ಕೊಡನು ಸರ್ವಜ್ಞ ||
--------------
ಸರ್ವಜ್ಞ
ಬೋರಾಡಿ ಸಾಲವನು | ಹಾರ್‍ಆಡಿ ಒಯ್ಯುವನು | ಈರಾಡಿ ಬಂದು ಕೇಳಿದರೆ ಸಾಲಿಗನು | ಚೀರಾಡಿ ಕೊಡುವನು ಸರ್ವಜ್ಞ ||
--------------
ಸರ್ವಜ್ಞ
ಸಾಲವನು ತರುವಾಗ | ಹಾಲು - ಹಣ್ಣುಂಬಂತೆ | ಸಾಲಿಗನು ಬಂದು ಎಳೆದಾಗ ಕಿಬ್ಬದಿಯ | ಕೀಲು ಮುರಿದಂತೆ ಸರ್ವಜ್ಞ ||
--------------
ಸರ್ವಜ್ಞ
ಸಾಲವನು ತರುವಾಗ | ಹಾಲು ಬೋನುಂಡಂತೆ | ಸಾಲಿಗನು ಬಂದು ಕೇಳಿದರೆ ಕುಂಡಿಗೆ ಚೇಳು ಕಡಿದಂತೆ ಸರ್ವಜ್ಞ ||
--------------
ಸರ್ವಜ್ಞ