ಒಟ್ಟು 7 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಂಬುವನು ಸಾಲವನು | ಉಂಬುವನು ಲೇಸಾಗಿ | ಬೆಂಬಲವ ಪಿಡಿದು - ಬಂದರಾದೇಗುಲದ | ಕಂಬದಂತಿಹನು ಸರ್ವಜ್ಞ ||
--------------
ಸರ್ವಜ್ಞ
ನಂಬಿಗೆಯ ಉಳ್ಳನಕ | ಕೊಂಬುವದು ಸಾಲವನು | ನಂಬಿಗೆಯ ಕೆಟ್ಟ ಬಳಿಕ ಬೆಂದಾವಿಗೆಯ | ಕುಂಭದಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ಬೇರೂರ ಸಾಲವನು | ನೂರನಾದರೂ ಕೊಳ್ಳು | ನೂರಾರು ವರ್ಷಕವ ಬಂದ ದಾರಿಯಲಿ | ಸಾರಿ ಹೋಗುವನು ಸರ್ವಜ್ಞ ||
--------------
ಸರ್ವಜ್ಞ
ಬೋರಾಡಿ ಸಾಲವನು | ಹಾರ್‍ಆಡಿ ಒಯ್ಯುವನು | ಈರಾಡಿ ಬಂದು ಕೇಳಿದರೆ ಸಾಲಿಗನು | ಚೀರಾಡಿ ಕೊಡುವನು ಸರ್ವಜ್ಞ ||
--------------
ಸರ್ವಜ್ಞ
ಸಾಲವನು ತರುವಾಗ | ಹಾಲು - ಹಣ್ಣುಂಬಂತೆ | ಸಾಲಿಗನು ಬಂದು ಎಳೆದಾಗ ಕಿಬ್ಬದಿಯ | ಕೀಲು ಮುರಿದಂತೆ ಸರ್ವಜ್ಞ ||
--------------
ಸರ್ವಜ್ಞ
ಸಾಲವನು ತರುವಾಗ | ಹಾಲು ಬೋನುಂಡಂತೆ | ಸಾಲಿಗನು ಬಂದು ಕೇಳಿದರೆ ಕುಂಡಿಗೆ ಚೇಳು ಕಡಿದಂತೆ ಸರ್ವಜ್ಞ ||
--------------
ಸರ್ವಜ್ಞ
ಸಾಲವನು ಮಾಡುವದು | ಹೇಲ ತಾ ಬಳಿಸುವದು | ಕಾಲಿನ ಕೆಳಗೆ ಕೆಡಹುವದು ತುತ್ತಿನಾ | ಚೀಲ ನೋಡಯ್ಯ ಸರ್ವಜ್ಞ ||
--------------
ಸರ್ವಜ್ಞ