ಒಟ್ಟು 33 ಕಡೆಗಳಲ್ಲಿ , 1 ವಚನಕಾರರು , 28 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಕಸಾಲಿಗನೂರಿ | ಗೊಕ್ಕಲೆಂದೆನಬೇಡ | ಬೆಕ್ಕು ಬಂದಿಲಿಯ ಹಿಡಿದಂತೆ ಊರಿಗವ | ರಕ್ಕಸನು ತಾನು ಸರ್ವಜ್ಞ ||
--------------
ಸರ್ವಜ್ಞ
ಅಕ್ಕಸಾಲೆಯ ಮಗನು | ಚಿಕ್ಕನೆಂದೆನಬೇಡ | ಚಿಕ್ಕಟವು ಮಯ ಕಡಿವಮ್ತೆ ಚಿಮ್ಮಟವ | ನಿಕ್ಕುತಲೆ ಕಳುವ ಸರ್ವಜ್ಞ ||
--------------
ಸರ್ವಜ್ಞ
ಅಕ್ಕಿ ಬೊನವು ಲೇಸು | ಸಿಕ್ಕ ಸೆರೆ ಬಿಡಲೇಸು | ಹಕ್ಕಿಗಳೊಳಗೆ ಗಿಳಿ ಲೇಸು | ಊರಿಗೊಬ್ಬ ಅಕ್ಕಸಾಲೆಂದ ಸರ್ವಜ್ಞ ||
--------------
ಸರ್ವಜ್ಞ
ಅಂದಿನಾ | ಪುಷ್ಪದತ್ತ || ಬಂದ ವರರುಚಿಯಾಗಿ ಮುಂ ದೇವಸಾಲೆ ಸರ್ವಜ್ಞ - ನೆಂದೆನಿಸಿ ನಿಂದವನು ತಾನೇ ಸರ್ವಜ್ಞ
--------------
ಸರ್ವಜ್ಞ
ಅಂಬಲೂರೊಳಗೆಸೆವ | ಕುಂಬಾರಸಾಲೆಯಲಿ ಇಂದಿನ | ಕಳೆಯ | ಮಾಳಿಯೊಳು - ಬಸವರಸ ನಿಂಬಿಟ್ಟನೆನ್ನ ಸರ್ವಜ್ಞ
--------------
ಸರ್ವಜ್ಞ
ಇದ್ದೂರ ಸಾಲ ಹೇ | ಗಿದ್ದರೂ ಕೊಳಬೇಡ | ಇದ್ದುದವನು ಸೆಳೆದು ಸಾಲಕೊಟ್ಟವನೊದ್ದು | ಗಿದ್ದು ಕೇಳುವನು ಸರ್ವಜ್ಞ ||
--------------
ಸರ್ವಜ್ಞ
ಕಡತಂದೆನಲ್ಲದೇ | ಹಿಡಿ ಕಳವ ಕದ್ದೆನೇ | ತಡವಲುರೆ ಬೈದು ತೆಗೆದಾನು ಸಾಲಿಗನು | ನಡುವೆ ಜಗಳವನು ಸರ್ವಜ್ಞ ||
--------------
ಸರ್ವಜ್ಞ
ಕೊಂಬುವನು ಸಾಲವನು | ಉಂಬುವನು ಲೇಸಾಗಿ | ಬೆಂಬಲವ ಪಿಡಿದು - ಬಂದರಾದೇಗುಲದ | ಕಂಬದಂತಿಹನು ಸರ್ವಜ್ಞ ||
--------------
ಸರ್ವಜ್ಞ
ಗಡ್ಡವಿಲ್ಲದ ಮೋರೆ | ದುಡ್ಡು ಇಲ್ಲದ ಚೀಲ | ಬಡ್ಡಿಯಾ ಸಾಲ ತೆರುವವನ ಬಾಳುವೆಯು | ಅಡ್ಡಕ್ಕು ಬೇಡ ಸರ್ವಜ್ಞ ||
--------------
ಸರ್ವಜ್ಞ
ಗಿಡ್ಡ ಹೆಂಡತಿ ಲೇಸು | ಮಡ್ಡಿ ಕುದುರೆಗೆ ಲೇಸು | ಬಡ್ಡಿಯಾ ಸಾಲ ಕೊಡಲೇಸು ಹಿರಿಯರಿಗೆ | ಗಡ್ಡ ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ನಂಬಿಗೆಯ ಉಳ್ಳನಕ | ಕೊಂಬುವದು ಸಾಲವನು | ನಂಬಿಗೆಯ ಕೆಟ್ಟ ಬಳಿಕ ಬೆಂದಾವಿಗೆಯ | ಕುಂಭದಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ನೂರು ಹಣ ಕೊಡುವನಕ | ಮೀರಿ ವಿನಯದಲಿಪ್ಪ | ನೂರರೋಳ್ಮೂರ ಕೇಳಿದರೆ ಸಾಲಿಗನು | ತೂರುಣನು ಮಣ್ಣು ಸರ್ವಜ್ಞ ||
--------------
ಸರ್ವಜ್ಞ
ಬೆಂಡಿರದೆ ಮುಳುಗಿದರೂ | ಗುಂಡೆದ್ದು ತೇಲಿದರೂ | ಬಂಡಿಯ ನೊಗವು ಚಿಗಿತರೂ ಸಾಲಿಗನು | ಕೊಂಡದ್ದು ಕೊಡನು ಸರ್ವಜ್ಞ ||
--------------
ಸರ್ವಜ್ಞ
ಬೇರೂರ ಸಾಲವನು | ನೂರನಾದರೂ ಕೊಳ್ಳು | ನೂರಾರು ವರ್ಷಕವ ಬಂದ ದಾರಿಯಲಿ | ಸಾರಿ ಹೋಗುವನು ಸರ್ವಜ್ಞ ||
--------------
ಸರ್ವಜ್ಞ
ಬೋರಾಡಿ ಸಾಲವನು | ಹಾರ್‍ಆಡಿ ಒಯ್ಯುವನು | ಈರಾಡಿ ಬಂದು ಕೇಳಿದರೆ ಸಾಲಿಗನು | ಚೀರಾಡಿ ಕೊಡುವನು ಸರ್ವಜ್ಞ ||
--------------
ಸರ್ವಜ್ಞ