ಒಟ್ಟು 13 ಕಡೆಗಳಲ್ಲಿ , 1 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉತ್ತಮರು ಎಂಬುವರು | ಸತ್ಯದಲಿ ನಡೆಯುವರು | ಉತ್ತಮರು ಅಧಮರೆನಬೇಡ ಅವರೊಂದು | ಮುತ್ತಿನಂತಿಹರು ಸರ್ವಜ್ಞ ||
--------------
ಸರ್ವಜ್ಞ
ಉತ್ತರೆಯು ಬರದಿಹರೆ | ಹೆತ್ತ ತಾಯ್ತೊರೆದರೆ | ಸತ್ಯವಂ ತಪ್ಪಿ ನಡೆದರೀಲೋಕ ವಿ | ನ್ನೆತ್ತ ಸೇರುವದು ಸರ್ವಜ್ಞ ||
--------------
ಸರ್ವಜ್ಞ
ದುರ್ಗಿ(ಮಾರಿಯ ಮುಂಡಿ) | ಯಗ್ಗದ ಶಕ್ತಿಗಳು ಸದ್ಗುಣ ಸತ್ಯ ಮುಸುರಿಹರ - ಮುಟ್ಟವು ಸದ್ಗುರುವಿನಾಜ್ಞೆ ಸರ್ವಜ್ಞ
--------------
ಸರ್ವಜ್ಞ
ನುಡಿಸುವದಸತ್ಯವನು | ಕೆಡಿಸುವದು ಧರ್ಮವನು | ಹಿಡಿಸಿವದು ಕಟ್ಟಿ ಒಡಿಲ ತಾ ಲೋಭವಾ | ಹಡಣ ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ
ಸತ್ಯಕ್ಕೆ ಸರಿಯಿಲ್ಲ | ಚಿತ್ತಕ್ಕೆ ಸ್ಥಿರವಿಲ್ಲ | ಹಸ್ತದಿಂದಧಿಕಹಿತರಿಲ್ಲ ಪರದೈವ | ನಿತ್ಯನಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಸತ್ಯಕ್ಕೆ ಸರಿಯಿಲ್ಲ | ಮಿಥ್ಯಕ್ಕೆ ನೆಲೆಯಿಲ್ಲ | ಹೆತ್ತಮ್ಮನಿಂದ ಹಿತರಿಲ್ಲ ನರರೊಳಗೆ | ನಿತ್ಯರೇ ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ಸತ್ಯನುಡಿದತ್ತರೂ | ಸುತನೊಬ್ಬ ಸತ್ತರೂ | ಸತ್ಯವನು ಬಿಡದ ಹರಿಶ್ಚಂದ್ರ ಜಗದೊಳು | ಸ್ತುತ್ಯನಾಗಿಹನು ಸರ್ವಜ್ಞ ||
--------------
ಸರ್ವಜ್ಞ
ಸತ್ಯರಿಗೆ ಧರೆಯೆಲ್ಲ | ಮಸ್ತಕವನೆರಗುವದು | ಹೆತ್ತ ತಾಯ್ಮಗನ ಕರೆವಂತೆ ಶಿವನವರನೆತ್ತಿ ಕೊಂಬುವನು ಸರ್ವಜ್ಞ ||
--------------
ಸರ್ವಜ್ಞ
ಸತ್ಯರೂ ಹುಸಿಯುವಡೆ | ಒತ್ತಿ ಹರಿದರೆ ಶರಧಿ | ಉತ್ತಮರು ಕೇಡಬಗೆದಿಹರೆ ಲೋಕವಿನ್ನೆತ್ತ| ಸಾಗುವದು ಸರ್ವಜ್ಞ ||
--------------
ಸರ್ವಜ್ಞ
ಸತ್ಯವೆಂಬುದು ತಾನು | ನಿತ್ಯದಲಿ ಮರೆದಿಹುದು | ಮಿಥ್ಯ ಸತ್ಯವನು ಬೆರೆದರೂ ಇಹಪರದಿ | ಸತ್ಯಕ್ಕೆ ಜಯವು ಸರ್ವಜ್ಞ ||
--------------
ಸರ್ವಜ್ಞ