ಒಟ್ಟು 8 ಕಡೆಗಳಲ್ಲಿ , 1 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಚಿಯಾ ಫಲಲೇಸು | ಮಿಂಚು ಮುಗಿಲಿಗೆ ಲೇಸು | ಕೆಚ್ಚನೆಯ ಸತಿಯು ಇರಲೇಸು ಊರಿಂಗೆ | ಪಂಚಾಳ ಲೇಸು ಸರ್ವಜ್ಞ ||
--------------
ಸರ್ವಜ್ಞ
ಕಿಚ್ಚುಂಟು ಕೆಸರುಂಟು | ಬೆಚ್ಚನಾ ಮನೆಯುಂಟು | ಇಚ್ಚಗೇ ಬರುವ ಸತಿಯುಂಟು | ಮಲೆನಾಡ ಮೆಚ್ಚ ನೋಡೆಂದ ಸರ್ವಜ್ಞ ||
--------------
ಸರ್ವಜ್ಞ
ಕೊಡಲೊಬ್ಬಳು ಸತಿಯು | ನೋಡಲೊಬ್ಬ ನೆಂಟ | ಬೇಡಿದ್ದನ್ನು ಕೊಡುವ ನೃಪತಿಯು ಭಕ್ತಿಯನು | ಮಾಡಿದರಿಗುಂಟು ಸರ್ವಜ್ಞ ||
--------------
ಸರ್ವಜ್ಞ
ಜ್ಯೋತಿಯಿಲ್ಲದ ಮನೆಯು | ರೀತಿಯಿಲ್ಲದ ಸತಿಯು ನಿತಿಯಿಲ್ಲದಾ ವಿಪ್ರನುಂ ಭಿಕ್ಷದಾ | ಪಾತ್ರೆಯೊಡೆದಂತೆ ಸರ್ವಜ್ಞ ||
--------------
ಸರ್ವಜ್ಞ
ಮಾತನರಿದಾ ಸುತನು | ರೀತಿಯರಿದಾ ಸತಿಯು | ನೀತಿಯನು ಅರಿತ ವಿಪ್ರತಾ ಜಗದೊಳಗೆ | ಜ್ಯೋತಿಯಿದ್ದಂತೆ ಸರ್ವಜ್ಞ ||
--------------
ಸರ್ವಜ್ಞ
ಮೊಬ್ಬಿನಲಿ ಕೊಬ್ಬಿದರು | ಉಬ್ಬಿ ನೀ ಬೀಳದಿರು | ಒಬ್ಬರಲಿ ಬಾಳ ಬಂದಲ್ಲಿ ಪರಸತಿಯು | ತಬ್ಬ ಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಸುಟ್ಟ ಬೆಳಸಿಯು ಲೇಸು | ಅಟ್ಟ ಬೊನವು ಲೇಸು | ಕಟ್ಟಾಣೆ ಸತಿಯು ಇರಲೇಸು ನಡುವಿಂಗೆ | ದಟ್ಟಿ ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ಸುರಪ ಹಂಸನ ಶಶಿಯು | ಕರಕರದ ರಾವಣನು | ವ ಕೀಚಕಾದಿ ಬಲಯುತರು | ಕೆಟ್ಟರಲೆ ಪರಸತಿಯು ಪಿಡಿದು ಸರ್ವಜ್ಞ ||
--------------
ಸರ್ವಜ್ಞ