ಒಟ್ಟು 9 ಕಡೆಗಳಲ್ಲಿ , 1 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರಿಗೆ ಕೇಸರಿ ವೈರಿ | ದುರಿತಕ್ಕೆ ಹರ ವೈರಿ | ಉರವಣಿಸಿ ಬರುವ ಸಂಸಾರದ ದುಃಖಕ್ಕೆ | ಪರಿಣಾಮ ವೈರಿ ಸರ್ವಜ್ಞ ||
--------------
ಸರ್ವಜ್ಞ
ಜಾತಿ-ಜಾತಿಗೆ ವೈರ | ನೀತಿ ಮೂರ್ಖಗೆ ವೈರ | ಪಾತಕವು ವೈರ ಸುಜನರ್ಗೆ ಅರಿದರಿಗೆ ಏತರದು ವೈರ ಸರ್ವಜ್ಞ ||
--------------
ಸರ್ವಜ್ಞ
ವಿದ್ಯೆ ಕಲಿಸದ ತಂದೆ | ಬುದ್ಧಿ ಹೇಳದ ಗುರುವು | ಬಿದ್ದಿರಲು ಬಂದ ನೋಡದಾ ತಾಯಿಯೂ | ಶುದ್ಧ ವೈರಿಗಳು ಸರ್ವಜ್ಞ ||
--------------
ಸರ್ವಜ್ಞ
ಹಾರುವರು ಎಂಬುವರು | ಏರಿಹರು ಗಗನಕ್ಕೆ | ಹಾರುವರ ಮೀರಿದವರಿಲ್ಲ ಅವರೊಡನೆ | ವೈರಬೇಡೆಂದ ಸರ್ವಜ್ಞ ||
--------------
ಸರ್ವಜ್ಞ