ಒಟ್ಟು 9 ಕಡೆಗಳಲ್ಲಿ , 1 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದ್ದಲ್ಲಿ ಸಲುವ ಹೋ | ಗಿದ್ದಲ್ಲಿಯೂ ಸಲುವ | ವಿದ್ಯೆಯನ್ನು ಬಲ್ಲ ಬಡವನಾ ಗಿರಿಯ | ಮೇಲಿರಲು ಸಲುವ ಸರ್ವಜ್ಞ ||
--------------
ಸರ್ವಜ್ಞ
ಒಡಲನಡಗಿದ ವಿದ್ಯೆ | ನಡೆದೊಡನೆ ಬರುತಿರಲು ಒಡಹುಟ್ಟಿದವರು ಕಳ್ಳರೂ ನೃಪರೆಂದು ಪಡೆಯರದನೆಂದ | ಸರ್ವಜ್ಞ ||
--------------
ಸರ್ವಜ್ಞ
ಕೋಟಿ ವಿದ್ಯೆಗಳಲ್ಲಿ | ಮೇಟಿ ವಿದ್ಯೆಯೇ ಮೇಲು | ಮೇಟಿಯಿಂ ರಾಟಿ ನಡೆದುದಲ್ಲದೆ ದೇಶ | ದಾಟವೇ ಕೆಡಕು | ಸರ್ವಜ್ಞ ||
--------------
ಸರ್ವಜ್ಞ
ವಿದ್ಯೆ ಕಲಿಸದ ತಂದೆ | ಬುದ್ಧಿ ಹೇಳದ ಗುರುವು | ಬಿದ್ದಿರಲು ಬಂದ ನೋಡದಾ ತಾಯಿಯೂ | ಶುದ್ಧ ವೈರಿಗಳು ಸರ್ವಜ್ಞ ||
--------------
ಸರ್ವಜ್ಞ
ವಿದ್ಯೆಕ್ಕೆ ಕಡೆಯಿಲ್ಲ | ಬುದ್ಧಿಗೆ ಬೆಲೆಯೆಯಿಲ್ಲ | ಛಿದ್ರಿಸುವವಗೆ ಗತಿಯಿಲ್ಲ ಮರಣಕ್ಕೆ | ಮದ್ದುಗಳೆ ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ವಿದ್ಯೆಯೇ ತಾಯ್ತಂದೆ | ಬುದ್ಧಿಯೇ ಸೋದರನು | ಆಭ್ವಾನ ಕಾದರವ ನೆಂಟ ಸುಖದಿ ತಾ | ನಿದ್ದುದೇ ರಾಜ್ಯ ಸರ್ವಜ್ಞ ||
--------------
ಸರ್ವಜ್ಞ
ವಿದ್ಯೆವುಳ್ಳನ ಮುಖವು | ಮುದ್ದು ಬರುವಂತಿಕ್ಕು | ವಿದ್ಯವಿಲ್ಲದನ ಬರಿಮುಖವು ಹಾಳೂರ | ಹದ್ದಿನಂತಿಕ್ಕು ಸರ್ವಜ್ಞ ||
--------------
ಸರ್ವಜ್ಞ
ವಿಪ್ರರಿಂದಲೇ ವಿದ್ಯೆ | ವಿಪ್ರರಿಂದಲೇ ಬುದ್ಧಿ | ವಿಪ್ರ ನಿಜವಿಪ್ರರಿಲ್ಲದಿರಲೇ ಜಗವು ಕ್ಷಿಪ್ರದಲಿ ಕೆಡಗು ಸರ್ವಜ್ಞ ||
--------------
ಸರ್ವಜ್ಞ