ಒಟ್ಟು 5 ಕಡೆಗಳಲ್ಲಿ , 1 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಷ್ಟದಳಕಮಲದಲಿ | ಕಟ್ಟಿತಿರುಗುವ ಹಂಸ | ಮೆಟ್ಟುವಾ ದಳವ ನಡುವಿರಲಿ ಇರುವದನು | ಮುಟ್ಟುವನೆ ಯೋಗಿ ಸರ್ವಜ್ನ್ಯ ||
--------------
ಸರ್ವಜ್ಞ
ಆಗಲೇಳು ಸಾಸಿರವು | ಮುಗಿಲು ಮುಟ್ಟುವಕೋಟೆ | ಹಗಲೆದ್ದು ಹತ್ತು ತಲೆಯಾತ ಪರಸತಿಯ | ನೆಗೆದು ತಾ ಕೆಟ್ಟ ಸರ್ವಜ್ಞ ||
--------------
ಸರ್ವಜ್ಞ
ಮುಟ್ಟು ಗಂಡವಳನ್ನು | ಮುಟ್ಟಲೊಲ್ಲರು ನೋಡು | ಮುಟ್ಟು ತಾ ತಡೆದು ಹುಟ್ಟಿರ್ದ ದೇಹವನು | ಮುಟ್ಟುತಿಹರೇಕೆ ಸರ್ವಜ್ಞ ||
--------------
ಸರ್ವಜ್ಞ