ಒಟ್ಟು 25 ಕಡೆಗಳಲ್ಲಿ , 1 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಕಸಾಲೆಯ ಮಗನು | ಚಿಕ್ಕನೆಂದೆನಬೇಡ | ಚಿಕ್ಕಟವು ಮಯ ಕಡಿವಮ್ತೆ ಚಿಮ್ಮಟವ | ನಿಕ್ಕುತಲೆ ಕಳುವ ಸರ್ವಜ್ಞ ||
--------------
ಸರ್ವಜ್ಞ
ಅಗ್ಗ ಬಡವಗೆ ಲೇಸು | ಬುಗ್ಗೆಯಗಸಗೆ ಲೇಸು | ತಗ್ಗಿನಾ ಗದ್ದೆ ಉಳಲೇಸು ಜೇಡಂಗೆ | ಮಗ್ಗ ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ಅಪ್ಪ ಹಾಕಿದ ಗಿಡವು | ಒಪ್ಪುತ್ತಲಿರುತಿರಲು | ತಪ್ಪಿಲ್ಲವೆಂದು ಅದನೇರಿ ಮಗನುರ್ಲ | ಗೊಪ್ಪಿಕೊಳ್ಳುವನೆ ಸರ್ವಜ್ಞ ||
--------------
ಸರ್ವಜ್ಞ
ಉಂಡು ಕೆಂಡವ ಕಾಸಿ | ಶತಪಥ ನಡೆದು | ಉಂಡೆಡದ ಮಗ್ಗುಲಲಿ ಮಲಗೆ ವೈದ್ಯನಾ | ಭಂಡಾಟವಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಎಂತಿರಲು ಪರರ ನೀ ಮುಂದೆ ನಂಬಲು ಬೇಡ | ಕುಂತಿ ಹೆಮ್ಮಗನ ಕೊಲಿಸಿದಳು ಮಾನವರ | ನೆಂತು ನಂಬುವದು ಸರ್ವಜ್ಞ ||
--------------
ಸರ್ವಜ್ಞ
ಒಮ್ಮೆ ಸೀತರೆ ಹೊಲ್ಲ | ಇಮ್ಮೆ ಸೀತರೆ ಲೇಸು ಕೆಮ್ಮಿಕೇಕರಿಸಿ ಉಗುಳುವಾ ಲೇಸು | ಆ ಬೊಮ್ಮಗು ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ಕಡುಗಾಸಿ ಚಿಮ್ಮಾಡಿ | ಕುಡಿಮಗುಚಿ ಕತ್ತರಿಸಿ | ಪುಡೆವೆಡೆಗಳೊಳಗೆ ಸಿಡಿಸಿದನು ಸಂವಳಿಸಿ | ಪಡೆದ ಪ್ರತಿವೆರಸಿ ಸರ್ವಜ್ಞ ||
--------------
ಸರ್ವಜ್ಞ
ಕಾಣಿಸಿರುವಂತವನ | ಕಾಣದೇಕಿರುವಿರೋ | ಕಾಣಲು ಬಿಡಲು ಕರ್ಮಗಳು ನಿನ್ನಿರವ | ಆಣೆ ಇಟ್ಟಿಹವು ಸರ್ವಜ್ಞ ||
--------------
ಸರ್ವಜ್ಞ
ಕಿರಿಮೀನು ಹಿರಿಮೀನು | ಕೊರೆ ತರೆದು ತಿಂಬಾತ ಗಿರುವವನು ಒಬ್ಬ ಮಗಸಾಯ ನೋವಿನಾ | ತೆರನ ತಾನರಿವ ಸರ್ವಜ್ಞ ||
--------------
ಸರ್ವಜ್ಞ
ಕೊಲು ಧರ್ಮಗಳ - ನೊಯ್ದು | ಒಲೆಯೊಳಗೆ ಇಕ್ಕುವಾ | ಕೊಲಲಾಗದೆಂಬ ಜೈನನಾ ಮತವೆನ್ನ | ತಲೆಯ ಮೇಲಿರಲಿ ಸರ್ವಜ್ಞ ||
--------------
ಸರ್ವಜ್ಞ
ಗಾಣಿಗನ ಒಡನಾಟ | ಕೋಣನಾ ಬೇಸಾಯ | ಕ್ಷೀಣಿಸುವ ಕುತ್ತ-ಸಮರ ಕ್ಷಾಮಗಳಿಂದ | ಪ್ರಾಣವೇಗಾಸಿ ಸರ್ವಜ್ಞ ||
--------------
ಸರ್ವಜ್ಞ
ತುಪ್ಪ ಒಗರ ಲೇಸು | ಉಪ್ಪರಿಗೆ ಮನೆ ಲೇಸು | ಅಪ್ಪ ಬಾರೆಂಬ ಮಗ ಲೇಸು ಊರೊಳಗೆ | ಶಿಂಪಿಗನು ಲೇಸು | ಸರ್ವಜ್ಞ ||
--------------
ಸರ್ವಜ್ಞ
ನಾನು ನೀನು ಭೇದಗ | ಳೇನು ಬೊಮ್ಮಗೆ ಇಲ್ಲ | ತಾನೆ ತಾನಾಗಿ ಇಪ್ಪುದೇ ಬೊಮ್ಮದಾ | ಸ್ಥಾನವೆಂದರಿಗು ಸರ್ವಜ್ಞ ||
--------------
ಸರ್ವಜ್ಞ
ನಾನು ನೀನು ಭೇದಗ | ಳೇನು ಬೊಮ್ಮಗೆ ಇಲ್ಲ | ತಾನೆ ತಾನಾಗಿಪ್ಪುದೆ ಬೊಮ್ಮದಾ | ಸ್ಥಾನವೆಂದರಿಗು ಸರ್ವಜ್ಞ ||
--------------
ಸರ್ವಜ್ಞ
ಪರಮಾತ್ಮಗೆಣೆಯಿಲ್ಲಂ | ಬರಕನಿಚ್ಚಣಿಕಿಲ್ಲ | ಹೊರಗಾದ ಮೇಲೆ ಭಯವಿಲ್ಲ ಮೃತ್ಯದೊ | ಳಿರುವವರು ಇಲ್ಲ ಸರ್ವಜ್ಞ ||
--------------
ಸರ್ವಜ್ಞ