ಒಟ್ಟು 7 ಕಡೆಗಳಲ್ಲಿ , 1 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉತ್ತಮರು ಪಾಲ್ಗೊಡಲೊ | ಳೆತ್ತಿದರೆ ಜನ್ಮವನು | ಉತ್ತಮರು ಅಧಮರೆನಬೇಡಿ ಹೊಲೆಯಿಲ್ಲ | ದುತ್ತಮರು ಎಲ್ಲಿ ಸರ್ವಜ್ಞ ||
--------------
ಸರ್ವಜ್ಞ
ಎಲ್ಲರನು ಬೇಡಿ | ಹಲ್ಲು ಬಾಯಾರುವು ದೆ ಬಲ್ಲಂತೆ ಶಿವನ ಭಜಿಸಿದೊಡೆ - ಶಿವ ದಾನಿ ಇಲ್ಲನ್ನಲರೆಯ ಸರ್ವಜ್ಞ
--------------
ಸರ್ವಜ್ಞ
ಕೊಡಲೊಬ್ಬಳು ಸತಿಯು | ನೋಡಲೊಬ್ಬ ನೆಂಟ | ಬೇಡಿದ್ದನ್ನು ಕೊಡುವ ನೃಪತಿಯು ಭಕ್ತಿಯನು | ಮಾಡಿದರಿಗುಂಟು ಸರ್ವಜ್ಞ ||
--------------
ಸರ್ವಜ್ಞ
ಖುಲ್ಲ ಮಾನವ ಬೇಡಿ | ಕಲ್ಲುತಾ ಕೊಡುವದೇ | ಸೊಲ್ಲರಿವ ಶಿವನ ಬೇಡಿದಡೆ ಬಯಸಿದುದು | ನೆಲ್ಲವನು ಕೊಡುವ ಸರ್ವಜ್ಞ ||
--------------
ಸರ್ವಜ್ಞ
ಬೇಡಂಗೆ ಕೊಡೆ ಹೊಲ್ಲ | ಆಡಿಂಗಮಳೆಹೊಲ್ಲ | ಬೇಡಿ ಉಂಬುವಂಗೆ ಬರ ಹೊಲ್ಲ ದ್ವಿಜನಿಗೆ | ಕಾಡುನುಡಿ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಬೇಡನೊಳ್ಳಿದನೆಂದು | ಆಡದಿರು ಸಭೆಯೊಳಗೆ | ಬೇಡಬೇಡಿದನು ಕೊಡದಿರಲು ಬಯ್ಗಿಂಗೆ | ಗೋಡೆಯನು ಒಡೆವ ಸರ್ವಜ್ಞ ||
--------------
ಸರ್ವಜ್ಞ