ಒಟ್ಟು 8 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕತ್ತಲೆಯ ಠಾವಿಂಗೆ | ಉತ್ತಮವು ಜ್ಯೋತಿ ತಾ| ಮತ್ತೆ ಪ್ರಜ್ವಲಿಸುವ ಠಾವು ಬೆಳಗಲು | ತ್ಯುತ್ತಮವಕ್ಕುದು ಸರ್ವಜ್ನ್ಯ ||
--------------
ಸರ್ವಜ್ಞ
ಜ್ಞಾನದಿಂ ಮೇಲಿಲ್ಲ | ಶ್ವಾನನಿಂ ಕೀಳಿಲ್ಲ | ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ | ಜ್ಞಾನವೇ ಮೇಲು ಸರ್ವಜ್ಞ ||
--------------
ಸರ್ವಜ್ಞ
ತಳಿಗೆಗಂ ತಲೆಯಿಲ್ಲ | ಮಳೆಗೆ ಜೋಯಿಸರಿಲ್ಲ | ಬೆಳಗಾಗೆ ಕನ್ನಗಳವಿಲ್ಲ ಲೋಕದೊಳು | ಉಳಿದಾಳ್ಗಳಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಮರನೊತ್ತಿಬೇಯುವದು | ಉರಿತಾಕಿ ಬೇಯದದು ? ಪುರಗಳ ನುಂಗಿ ಬೆಳಗುವದು ಲೋಕದಲಿ | ನರನಿದೇನೆಂಬೆ ಸರ್ವಜ್ಞ ||
--------------
ಸರ್ವಜ್ಞ
ರುಚಿಗಳಿಗೆ ನೆರೆಗಳೆದು | ಶುಚಿಗಲಿ ಮೆರೆವಂಗೆ ಪಚನವದು ಬೆಳಗಿ ಬಲದಿ ಬಾಳುವನೆಂಬಿ | ವಚನವೊಂದಿಹುದು ಸರ್ವಜ್ಞ ||
--------------
ಸರ್ವಜ್ಞ
ಸೊಡರು ಲಂಚವ ಕೊಂಡು | ಕೊಡುವ ದೊಪ್ಪಚಿ ಬೆಳಗ | ಪೊಡವಿಗಂ ಸೂರ್ಯ ಬೆಳಗೀವೋಲ್ಲಂಚವನು | ಹಿಡಿಯದವ ಧರ್ಮಿ ಸರ್ವಜ್ಞ ||
--------------
ಸರ್ವಜ್ಞ
ಹರಗದ ಎತ್ತಾಗಿ | ಬರಡದ ಹಯನಾಗಿ | ಹರಟೆ ಹೊಡೆಯುವಾ ಮಗನಾಗಿ ಹೊಲದಲ್ಲಿ | ಕರಡವೇ ಬೆಳಗು ಸರ್ವಜ್ಞ ||
--------------
ಸರ್ವಜ್ಞ