ಒಟ್ಟು 11 ಕಡೆಗಳಲ್ಲಿ , 1 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದ್ದಿನಾ ಒಡೆ ಲೇಸು | ಬುದ್ಧಿಯಾ ನುಡಿ ಲೇಸು | ಬಿದ್ದೊಡನೆ ಕಯ್ಗೆ ಬರಲೇಸು ಶಿಶುವಿಂಗೆ | ಮುದ್ದಾಟ ಲೇಸು ಸರ್ವಜ್ಞ ||
--------------
ಸರ್ವಜ್ಞ
ಉದ್ದು ಮದ್ದಿಗೆ ಹೊಲ್ಲ | ನಿದ್ದೆ ಯೋಗಿಗೆ ಹೊಲ್ಲ | ಬಿದ್ದಿರಲು ಹೊಲ್ಲ ಉದ್ಯೋಗಿ ಬಡವಂಗೆ | ಗುದ್ದಾಟ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಉದ್ದುರುಟು ಮಾತಾಡಿ | ಇದುದನು ಹೋಗಾಡಿ | ಉದ್ದನಾ ಮರವ ತುದಿಗೇರಿ ತಲೆಯೂರಿ | ಬಿದ್ದು ಸತ್ತಂತೆ ಸರ್ವಜ್ಞ ||
--------------
ಸರ್ವಜ್ಞ
ಉದ್ಯೋಗವಿಲ್ಲದವನು | ಬಿದ್ದಲ್ಲಿ ಬಿದ್ದಿರನು | ಹದ್ದುನೆವನವನು ಈಡಾಡಿ ಹಾವ ಕೊಂ | ಡೆದ್ದು ಹೋದಂತೆ ಸರ್ವಜ್ಞ ||
--------------
ಸರ್ವಜ್ಞ
ಪಾಪವೆನ್ನದು ಕಾಯ | ಪುಣ್ಯ ನಿನ್ನದು ರಾಯ | ಕೂಪದೊಳು ಬಿದ್ದು ಕೊರಹುತಿಹೆ ಗುರುರಾಯ | ರೂಪುಗೊಳಿಸಯ್ಯ ಸರ್ವಜ್ನ್ಯ ||
--------------
ಸರ್ವಜ್ಞ
ಬಲ್ಲಿದನು ನುಡಿದಿಹರೆ | ಬೆಲ್ಲವನು ಮೆದ್ದಂತೆ | ಇಲ್ಲದಾ ಬಡವ ನುಡಿದಿಹರೆ - ಬಾಯಿಂದ | ಜೊಲ್ಲು ಬಿದ್ದಂತೆ ಸರ್ವಜ್ಞ ||
--------------
ಸರ್ವಜ್ಞ
ಮದ್ಯಪಾನವ ಮಾಡಿ | ಇದ್ದುದೆಲ್ಲವ ನೀಡಿ | ಬಿದ್ದು ಬರುವವನ ಸದ್ದಡಗಿ ಸಂತಾನ | ವೆದ್ದು ಹೋಗುವದು ಸರ್ವಜ್ಞ ||
--------------
ಸರ್ವಜ್ಞ
ಮಾತು ಬಲ್ಲಾತಂಗೆ | ಮಾತೊಂದು ಮಾಣಿಕವು | ಮಾತ ತಾನರಿಯದ ಅಧಮಗೆ ಮಾಣಿಕವು | ತೂತು ಬಿದ್ದಂತೆ ಸರ್ವಜ್ಞ ||
--------------
ಸರ್ವಜ್ಞ
ವಿದ್ಯೆ ಕಲಿಸದ ತಂದೆ | ಬುದ್ಧಿ ಹೇಳದ ಗುರುವು | ಬಿದ್ದಿರಲು ಬಂದ ನೋಡದಾ ತಾಯಿಯೂ | ಶುದ್ಧ ವೈರಿಗಳು ಸರ್ವಜ್ಞ ||
--------------
ಸರ್ವಜ್ಞ
ಸಿದ್ಧರಿಗೆ ಯೋಗವನು | ಬುದ್ಧಿವಂತಗೆ ಮತಿಯ | ಬಿದ್ದ ಅಡಿವಿಯಾ ಕಿಚ್ಚನಂ ಮುಳ್ಳು ಮೊಳೆ | ತಿದ್ದುವವರಾರು ಸರ್ವಜ್ಞ ||
--------------
ಸರ್ವಜ್ಞ