ಒಟ್ಟು 10 ಕಡೆಗಳಲ್ಲಿ , 1 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಶೆಯತಿ ಕೇಡೆಂದು | ಹೇಸಿ ನಾಚುತಲಿಕ್ಕು | ಆಶೆಯನು ಬಿಡದೆ - ಅಭಿಮಾನಕ್ಕೋರಿದರೆ | ಘಾಸಿಯಾಗಿಕ್ಕು ಸರ್ವಜ್ಞ ||
--------------
ಸರ್ವಜ್ಞ
ಎಂಜಲು ಶೌಚವು | ಸಂಜೆಯೆಂದೆನ ಬೇಡ ಕುಂಜರ ವನವ ನೆನೆವಂತೆ - ಬಿಡದೆ ನಿ ರಂಜನನ ನೆನೆಯ ಸರ್ವಜ್ಞ delete
--------------
ಸರ್ವಜ್ಞ
ಎಡವಿ ಬಟ್ಟೊಡೆದರೂ | ಕೆಡೆಬೀಳಲಿರಿದರೂ | ನಡು ಬೆನ್ನಿನಲಗು ಮುರಿದರೂ ಹಾದರದ | ಕಡಹು ಬಿಡದೆಂದ ಸರ್ವಜ್ಞ ||
--------------
ಸರ್ವಜ್ಞ
ಎಂಬಲವು ಸೌಚವು | ಸಂಜೆಯೆಂದೆನಬೇಡ | ಕುಂಜರವು ವನವ ನೆನೆವಂತೆ ಬಿಡದೆ ನಿ | ರಂಜನನ ನೆನೆಯೋ ಸರ್ವಜ್ಞ ||
--------------
ಸರ್ವಜ್ಞ
ಕಡೆ ಬಿಳಿದು ನಡಗಪ್ಪು | ಉಡುವ ವಸ್ತ್ರವದಲ್ಲ್ | ಬಿಡದೆ ನೀರುಂಟು ಮಡುವಲ್ಲ ಕವಿಗಳೇ ಬೆಡಗು ಪೇಳುವರು ಸರ್ವಜ್ಞ ||
--------------
ಸರ್ವಜ್ಞ
ಕಣ್ಣು ನಾಲಿಗೆ ಮನವ | ಪನ್ನಗಧರ ಕೊಟ್ಟ | ಚಿನ್ನಾಗಿ ಮನವ | ತೆರೆದ ನೀ ಬಿಡದೆ ಶ್ರೀ | ಚಿನ್ನನಂ ನೆನಯೋ ಸರ್ವಜ್ಞ ||
--------------
ಸರ್ವಜ್ಞ
ಗಡಿಗೆ-ಮಡಕೆಯ ಕೊಂಡು | ಅಡುವಡಾವಿಗೆಯೊಳಗೆ ಬಿಡದೆ ಮಳೆಮೋಡ ಹಿಡಿಯಲವ - ರಿಬ್ಬರಿಗು ತಡೆ ಬಿಡಲಾಯ್ತು ಸರ್ವಜ್ಞ
--------------
ಸರ್ವಜ್ಞ
ತುಂಬಿದಾ ಕೆರೆ ಭಾವಿ | ತುಂಬಿದಂತಿರುವದೇ | ನಂಬಿರಲು ಬೇಡ ಲಕ್ಶ್ಮಿಯನು ಬಡತನವು | ಬೆಂಬಿಡದೆ ಬಹುದು ಸರ್ವಜ್ಞ ||
--------------
ಸರ್ವಜ್ಞ
ಭಕ್ತಗೆರಡಕ್ಕರವು | ಮುಕ್ತಿಗೆರಡಕ್ಕರವು | ಭಕ್ತಿಯಿಂ ಮುಕ್ತಿ ಪಡೆಯುವರೆ ಬಿಡದೆ ಆ | ರಕ್ಕರವ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಸುಟ್ಟೊಲೆಯು ಬಿಡದೆ ತಾ | ನಟ್ಟ ಮೇಲುರಿದಂತೆ | ಕೊಟ್ಟಮೇಲುರಿವ ನಳಿಯನೆಂಬೀ ಮಾತು | ಕಟ್ಟಿ ಇಟ್ಟಂತೆ ಸರ್ವಜ್ಞ ||
--------------
ಸರ್ವಜ್ಞ