ಒಟ್ಟು 81 ಕಡೆಗಳಲ್ಲಿ , 1 ವಚನಕಾರರು , 67 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಜನನೊಕ್ಕಲು ಅಲ್ಲ | ಹೂಜೆ ಭಾಂಡಿಯೊಳಲ್ಲ | ಗಾಜೊಂದು ಲೋಹದೊಳಗಲ್ಲ ಅಂಬಲಿಯು | ಭೋಜನದೊಳಲ್ಲ ಸರ್ವಜ್ಞ ||
--------------
ಸರ್ವಜ್ಞ
ಅತ್ತಲಂಬಲಿಯೊಳಗೆ ಇತ್ತೊಬ್ಬನಿದ್ದಾನೆ | ಅತ್ತವನ ನೋಡು ಜನರೆಲ್ಲ ಈ ತುತ್ತ | ನೆಂತುಂಬರಯ್ಯ ಸರ್ವಜ್ಞ ||
--------------
ಸರ್ವಜ್ಞ
ಅಂಬಲೂರೊಳಗೆಸೆವ | ಕುಂಬಾರಸಾಲೆಯಲಿ ಇಂದಿನ | ಕಳೆಯ | ಮಾಳಿಯೊಳು - ಬಸವರಸ ನಿಂಬಿಟ್ಟನೆನ್ನ ಸರ್ವಜ್ಞ
--------------
ಸರ್ವಜ್ಞ
ಅಲ್ಲಪ್ಪನೂರಲ್ಲಿ | ಬಲ್ಲಪ್ಪನಲ್ಲಪ್ಪ | ಬಲ್ಲಪ್ಪನಿಪ್ಪ ಊರಲ್ಲಿ ಅಲ್ಲಪ್ಪ | ಬಲ್ಲಪ್ಪನಪ್ಪ ಸರ್ವಜ್ಞ ||
--------------
ಸರ್ವಜ್ಞ
ಅಲ್ಲಿಗಲ್ಲಿಗೆ ಕಲ್ಲು | ಕಲ್ಲಿನಾ ಕಡೆ ತಂತಿ | ಬಲ್ಲಿದರ ರಥವು ಹೊಗೆಯುತ್ತ ಬರಲದರ | ಸೊಲ್ಲು ಕೇಳೆಂದ ಸರ್ವಜ್ಞ ||
--------------
ಸರ್ವಜ್ಞ
ಅಳೆ ಲೇಸು ಗೊಲ್ಲಂಗೆ | ಮಳೆ ಲೇಸು ಕಳ್ಳಂಗೆ | ಬಲೆ ಲೇಸು ಮೀನ ಹಿಡಿವಂಗೆ | ಕುರುಡಂಗೆ ಸುಳಿದಾಟ ಲೇಸು ಸರ್ವಜ್ಞ ||
--------------
ಸರ್ವಜ್ಞ
ಆಡಾದನಾ ಅಜನು | ಕೊಡಗನದಾದನು ಹರಿಯು ನೋಡಿದರೆ ಶಿವನು ನರಿಯಾದನೀ ಬೆಡಗೆ ರೂಢಿಯೊಳು ಬಲ್ಲೆ ಸರ್ವಜ್ಞ ||
--------------
ಸರ್ವಜ್ಞ
ಆರಾರ ನಂಬುವಡೆ | ಆರಯ್ದು ನಂಬುವದು | ನಾರಾಯಣನಿಂದ ಬಲಿಕೆಟ್ಟ | ಮಿಕ್ಕವರ ನಾರು ನಂಬುವರು ಸರ್ವಜ್ಞ ||
--------------
ಸರ್ವಜ್ಞ
ಆಲಸಿಕೆಯಲಿರುವಂಗೆ ಕ್ಲಸಲಂಬಲಿಯಿಲ್ಲ | ಕೆಲಸಕ್ಕೆ ಆಲಸದಿರುವಂಗೆ ಬೇರಿಂದ | ಹಲಸು ಕಾತಂತೆ ಸರ್ವಜ್ಞ ||
--------------
ಸರ್ವಜ್ಞ
ಆಳಾಗಬಲ್ಲವನು | ಆಳುವನು ಅರಸಾಗಿ | ಆಳಾಗಿ ಬಾಳಲರೆಯದವ ಕಡೆಯಲ್ಲಿ | ಹಾಳಾಗಿ ಹೋದ ಸರ್ವಜ್ಞ ||
--------------
ಸರ್ವಜ್ಞ
ಇದ್ದಲ್ಲಿ ಸಲುವ ಹೋ | ಗಿದ್ದಲ್ಲಿಯೂ ಸಲುವ | ವಿದ್ಯೆಯನ್ನು ಬಲ್ಲ ಬಡವನಾ ಗಿರಿಯ | ಮೇಲಿರಲು ಸಲುವ ಸರ್ವಜ್ಞ ||
--------------
ಸರ್ವಜ್ಞ
ಇನ್ನು ಬಲ್ಲರೆ ಕಾಯಿ | ಮುನ್ನಾರಾ ಅರವತ್ತು | ಹಣ್ಣು ಹನ್ನೆರಡು ಗೊನೆ ಮೂರು ತೊಟ್ಟೊಂದು | ಚನ್ನಾಗಿ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಇಲ್ಲದವನಹುದಾಡೆ | ಬಲ್ಲಂತೆ ಬೊಗಳುವರು | ಬಲ್ಲಿದನು ಅಲ್ಲ್ದಾಡಿದರೆ ಎಲ್ಲವರು | ಬೆಲ್ಲವೆಂಬವರು ಸರ್ವಜ್ಞ ||
--------------
ಸರ್ವಜ್ಞ
ಇಲ್ಲದಾ ಮಾಯೆಯದು | ಎಲ್ಲಿಂದಲೆನಹದಲೆ | ಬಲ್ಲಿತದು ಮಾಯೆಯೆನಬೇಡ | ತಿಳಿಯಲ್ಕೆ ಎಲ್ಲಿಹುದು ? ಮಾಯೆ ಸರ್ವಜ್ಞ ||
--------------
ಸರ್ವಜ್ಞ
ಉಣ್ಣದಲೆ ಉರಿಯುವರು | ಮಣ್ಣಿನಲಿ ಮೆರೆಯುವರು | ಗಾಜೊಂದು ಲೋಹದೊಳಗಲ್ಲ ಅಂಬಲಿಯು | ಭೋಜನದೊಳಲ್ಲ ಸರ್ವಜ್ಞ ||
--------------
ಸರ್ವಜ್ಞ