ಒಟ್ಟು 9 ಕಡೆಗಳಲ್ಲಿ , 1 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರೆದಲೆಯು ಮೂಡಲು ಹೊರದಲೆಯು ಬಡಗಲೂ | ಸರಿಯಲೆಯು ಉದ್ದ ಪಡುವಲುಂ ತೆಂಗಣದಿ | ಬರಿದಲೆಯಲಿಹರು ಸರ್ವಜ್ಞ ||
--------------
ಸರ್ವಜ್ಞ
ಒಬ್ಬರಿದ್ದರೆ ಸ್ವಾಂತ | ಇಬ್ಬರಲಿ ಏಕಾಂತ | ಇಬ್ಬರಿಂದೊಬ್ಬನರಿದು ಬೇರೊಬ್ಬನಿಂ | ಹಬಿ ಲೋಕಾಂತ ಸರ್ವಜ್ಞ ||
--------------
ಸರ್ವಜ್ಞ
ಗಡಿಗೆ-ಮಡಕೆಯ ಕೊಂಡು | ಅಡುವಡಾವಿಗೆಯೊಳಗೆ ಬಿಡದೆ ಮಳೆಮೋಡ ಹಿಡಿಯಲವ - ರಿಬ್ಬರಿಗು ತಡೆ ಬಿಡಲಾಯ್ತು ಸರ್ವಜ್ಞ
--------------
ಸರ್ವಜ್ಞ
ಪ್ರಸ್ತಕ್ಕಿಲ್ಲದ ಮಾತು | ಹತ್ತು ಸಾವಿರ ವ್ಯರ್ಥ | ಕತ್ತೆ ಕೂಗಿದರೆ ಫಲವುಂಟು ಬರಿಮಾತು | ಕತ್ತೆಗಿಂ ಕಷ್ಟ ಸರ್ವಜ್ಞ ||
--------------
ಸರ್ವಜ್ಞ
ಮಾತು ಬಲ್ಲಾತಂಗೆ | ಯಾತವದು ಸುರಿದಂತೆ | ಮಾತಾಡಲರಿಯದಾತಂಗೆ ಬರಿ ಯಾತ | ನೇತಾಡಿದಂತೆ ಸರ್ವಜ್ಞ ||
--------------
ಸರ್ವಜ್ಞ
ರಸಿಕನಾಡಿದ ಮಾತು | ಶಶಿಯುದಿಸಿ ಬಂದಂತೆ | ರಸಿಕನಲ್ಲದನ ಬರಿಮಾತು ಕಿವಿಯೊಳ್ಕೂರ್ದಸಿಯು ಬಡಿದಂತೆ ಸರ್ವಜ್ಞ ||
--------------
ಸರ್ವಜ್ಞ
ವಿದ್ಯೆವುಳ್ಳನ ಮುಖವು | ಮುದ್ದು ಬರುವಂತಿಕ್ಕು | ವಿದ್ಯವಿಲ್ಲದನ ಬರಿಮುಖವು ಹಾಳೂರ | ಹದ್ದಿನಂತಿಕ್ಕು ಸರ್ವಜ್ಞ ||
--------------
ಸರ್ವಜ್ಞ
ಹಾಲು ಇಲ್ಲದ ಊಟ | ಬಾಲೆಯರ ಬರಿ ನೋಟ | ಕಾಲಿಲ್ಲದವನ ಹರಿದಾಟ ಕಂಗಳನ | ಕೋಲು ಕಳೆದಂತೆ ಸರ್ವಜ್ಞ ||
--------------
ಸರ್ವಜ್ಞ