ಒಟ್ಟು 7 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಡರಿ ಮೂಡಲು ಮಿಂಚು | ಪಣುವಣ್ಗೆ ಧನುವೇಳೆ | ಬಡಗಣದ ಗಾಳಿ ಕಡುಬೀಸೆ ಮಳೆಯು ತಾ | ತಡೆಯದಲೆ ಬಕ್ಕು ಸರ್ವಜ್ಞ ||
--------------
ಸರ್ವಜ್ಞ
ಅಳಿವಣ್ಣದಾಕಾಶ | ಗಿಳಿವಣ್ಣದಾ ಮುಗಿಲು | ಅಳಿದಳಿದುಮರ್ಕ ನುದಯಿಲು ಮಳೆಯು ತಾ | ಘಳಿಲನೇ ಬಕ್ಕು ಸರ್ವಜ್ಞ ||
--------------
ಸರ್ವಜ್ಞ
ಆದಿಯಾ ಮಾಸವನು | ವೇದದಿಂದಲಿ ಗುಣಿಸಿ | ಆ ದಿನದ ತಿಥಿಯನೊಡಿಸಲು ಯೋಗ | ವಾದಿನದ ಬಕ್ಕು ಸರ್ವಜ್ಞ ||
--------------
ಸರ್ವಜ್ಞ
ಏನು ಮನ್ನಿಸದಿರಲು | ಸೀನು ಮನ್ನಿಸಬೇಕು | ಸೀನು ಮನ್ನಿಸದೆ ಹೋಗಿಹರೆ ಹೋದಲ್ಲಿ | ಹಾನಿಯೇ ಬಕ್ಕು ಸರ್ವಜ್ಞ ||
--------------
ಸರ್ವಜ್ಞ
ಗತವಾದ ಮಾಸವನು | ಗತಿಯಿಂದ ದ್ವಿಗುಣಿಸುತ | ಪ್ರತಿಪದದ ತಿಥಿಯನೊಡಗೂಡೆ ಕರಣ ತಾ | ನತಿಶಯದಿ ಬಕ್ಕು ಸರ್ವಜ್ಞ ||
--------------
ಸರ್ವಜ್ಞ
ತೆಂಕಣಕೆ ಮುಗಿಲಡರಿ | ಶಂಕರನೆ ದೆಶ ಮಿಂಚೆ | ಪಂಕಜಾರಾತ ಗುಡಿಗೆಟ್ಟ ಮಳೆಯು ತಾ | ಭೋಂಕನೇ ಬಕ್ಕು ಸರ್ವಜ್ಞ ||
--------------
ಸರ್ವಜ್ಞ
ಮೀನಕ್ಕೆ ಶನಿ ಬರಲು | ಶಾನೆ ಕಾಳಗವಕ್ಕು | ಬೇನೆ ಬಂಧಾನಗಳು ತಾವಕ್ಕು ಬರನಕ್ಕು ಲೋಕಕ್ಕೆ | ಹಾನಿಯೇ ಬಕ್ಕು ಸರ್ವಜ್ಞ ||
--------------
ಸರ್ವಜ್ಞ