ಒಟ್ಟು 10 ಕಡೆಗಳಲ್ಲಿ , 1 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಾವ ಜೀವವನು | ಹೇವವಿಲ್ಲದೆ ಕೊಂದು | ಸಾವಾಗ ಶಿವನ ನೆನೆಯುವಡೆ | ಅವ ಬಂದು | ಕಾವನೇ ಹೇಳು ಸರ್ವಜ್ಞ ||
--------------
ಸರ್ವಜ್ಞ
ಉದ್ಯೋಗವುಳ್ಳವನ | ಹೊದ್ದುವದು ಸಿರಿ ಬಂದು | ಉದ್ಯೋಗವಿಲ್ಲದಿರುವವನು ಕರದೊಳಗೆ | ಇದ್ದರೂ ಪೋಕು ಸರ್ವಜ್ಞ ||
--------------
ಸರ್ವಜ್ಞ
ಉರಿ ಬಂದು ಬೇಲಿಯನು | ಹರಿದು ಹೊಕ್ಕದ ಕಂಡೆ ಅರಿಯದಿದರ ಬಗೆಗೆ ಕವಿಕುಲ ಶೇಷ್ಠರುಗಳೆಂದರಿದು ಪೇಳಿ | ಸರ್ವಜ್ಞ ||
--------------
ಸರ್ವಜ್ಞ
ಕಿರಿಯಂದಿನಾ ಪಾಪ | ನೆರೆ ಬಂದು ಹೋದೀತೆ | ಅರವಿಂಗೆ ಹಿರಿದು ಕಿರಿದಿಲ್ಲ ಇದನು ನೀ | ನರಿದು ನೋಡೆಂದ ಸರ್ವಜ್ಞ ||
--------------
ಸರ್ವಜ್ಞ
ತಿಂದು ಗಾದಿಯ ಮೇಲೆ | ಬಂದು ಗುರು ಬೀಳ್ವಂತೆ | ಬಂದ ಪ್ರಸ್ತಾಪಕೊದಗಿದರೆ ಆ ಮಾತು | ನೊಂದೆನ್ನಬಹುದೆ ಸರ್ವಜ್ಞ ||
--------------
ಸರ್ವಜ್ಞ
ಬಂದಿಹೆನು ನಾನೊಮ್ಮೆ | ಬಂದು ಹೋಗುವೆನೊಮ್ಮೆ ಬಂದೊಮ್ಮೆ ಹೋಗೆ ಬಾರೆ ನಾಂ ಕವಿಗಳಲಿ | ವಂದ್ಯರಿಗೆ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಬೋರಾಡಿ ಸಾಲವನು | ಹಾರ್‍ಆಡಿ ಒಯ್ಯುವನು | ಈರಾಡಿ ಬಂದು ಕೇಳಿದರೆ ಸಾಲಿಗನು | ಚೀರಾಡಿ ಕೊಡುವನು ಸರ್ವಜ್ಞ ||
--------------
ಸರ್ವಜ್ಞ
ಮಾತು ಬಲ್ಲಹ ತಾನು | ಸೋತುಹೋಹುದ ಲೇಸು | ಮಾತಿಂಗೆ ಮಾತು ಮಥಿಸಲ್ಕೆ ವಿಧಿ ಬಂದು | ಆತುಕೊಂಡಿಹುದು ಸರ್ವಜ್ಞ ||
--------------
ಸರ್ವಜ್ಞ
ಸಾಲವನು ತರುವಾಗ | ಹಾಲು - ಹಣ್ಣುಂಬಂತೆ | ಸಾಲಿಗನು ಬಂದು ಎಳೆದಾಗ ಕಿಬ್ಬದಿಯ | ಕೀಲು ಮುರಿದಂತೆ ಸರ್ವಜ್ಞ ||
--------------
ಸರ್ವಜ್ಞ
ಸಾಲವನು ತರುವಾಗ | ಹಾಲು ಬೋನುಂಡಂತೆ | ಸಾಲಿಗನು ಬಂದು ಕೇಳಿದರೆ ಕುಂಡಿಗೆ ಚೇಳು ಕಡಿದಂತೆ ಸರ್ವಜ್ಞ ||
--------------
ಸರ್ವಜ್ಞ