ಒಟ್ಟು 5 ಕಡೆಗಳಲ್ಲಿ , 1 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದ್ವಿಜನಿಂಗೆ ಸಾಮರ್ಥ್ಯ | ಭುಜಗಂಗೆ ಕಡುನಿದ್ರೆ | ಗಜಪತಿಗೆ ಮದವು ಅತಿಗೊಡೆ ಲೋಕದಾ | ಪ್ರಜೆಯು ಬಾಳುವರೇ ಸರ್ವಜ್ಞ ||
--------------
ಸರ್ವಜ್ಞ
ನಿದ್ರೆಯಿಂ ಸುಖವಿಲ್ಲ | ಪದ್ರದಿಂ ಅರಿಯಿಲ್ಲ ಮುಖ ಮುದ್ರೆಯಿಂದಧಿಕ ಮಾತಿಲ್ಲ ದೈವವುಂ | ರುದ್ರನಿಂದಿಲ್ಲ | ಸರ್ವಜ್ಞ ||
--------------
ಸರ್ವಜ್ಞ
ಮನ ಭಂಗವಾದಂದು | ಘನನಿದ್ರೆ ಹೋದಂದು | ವನಿತೆಯರು ಸುತರು ಜರಿದಂದು ಮರಣವೇ | ತನಗೆ ಬಂತೆಂದ ಸರ್ವಜ್ಞ ||
--------------
ಸರ್ವಜ್ಞ
ಹಸಿವು-ತೃಷೆ-ನಿದ್ರೆಗಳು | ವಿಷಯ ಮೈಥುನ ಬಯಕೆ | ಪಶು-ಪಕ್ಷಿ ನರಗೆ ಸಮನಿರಲು ಕುಲವೆಂಬ | ಘಸಣಿಯೆತ್ತಣದು ಸರ್ವಜ್ಞ ||
--------------
ಸರ್ವಜ್ಞ
ಹಾಸು ಇಲ್ಲದ ನಿದ್ರೆ | ಪೂಸು ಇಲ್ಲದ ಮೀಹ | ಭಾಷೆಯರಿಯದಳ ಗೆಳೆತನವು ಮೋಟಕ್ಕೆ | ಬೀಸಿ ಕರದಂತೆ ಸರ್ವಜ್ಞ ||
--------------
ಸರ್ವಜ್ಞ