ಒಟ್ಟು 13 ಕಡೆಗಳಲ್ಲಿ , 1 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಚ್ಚು ಇಲ್ಲದ ಭಂಡಿ | ಮೆಚ್ಚು ಇಲ್ಲದ ದೊರೆಯು | ರಚ್ಚೆಯಲಿ ಇಹನ ಕಿವಿಮಾತು ಎಂದಿಗೂ | ನೆಚ್ಚಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಅರಮನೆಯಲಿರುತಿಹುದು | ಕರದಲ್ಲಿ ಬರುತಿಹುದು | ಕೊರೆದು ವಂಶಜರ ತಿನುತಿಹುದು | ಕವಿಗಳಲಿ | ದೊರೆಗಳಿದ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಅರಿಯೆನೆಂಬುವದೊಂದು | ಅರಸು ಕೆಲಸವು ಕಾಣೋ | ಅರಿದೆನೆಂದಿಹನು ದೊರೆಗಳಾ ಆಳೆಂದು | ಮರೆಯಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಎರೆಯನ್ನು ಉಳುವಂಗೆ | ದೊರೆಯನ್ನು ಪಿಡಿದಂಗೆ | ಉರಗ ಭೂಷಣನ ನೆನೆವಂಗೆ ಭಾಗ್ಯವು | ಅರಿದಲ್ಲವೆಂದು ಸರ್ವಜ್ಞ ||
--------------
ಸರ್ವಜ್ಞ
ಗುರುಪಾದಸೇವೆ ತಾ | ದೊರೆಕೊಂಡಿತಾದೊಡೆ ಹರೆವುದು ಪಾಪವರಿದೆನಲು - ವಜ್ರಾಯುಧದಿ ಗಿರಿಯ ಹೊಯ್ದಂತೆ ಸರ್ವಜ್ಞ
--------------
ಸರ್ವಜ್ಞ
ಗುರುವಿನ ಸೇವೆಯು | ದೊರಕೊಂಡಿತಾದೊಡೆ ಹರೆವುದು ಪಾಪವರಿದೆನಲು - ವಜ್ರಾಯುಧದಿ ಗಿರಿಯ ಹೊಯ್ದಂತೆ ಸರ್ವಜ್ಞ
--------------
ಸರ್ವಜ್ಞ
ನಿಶ್ಚಯವ ಬಿಡದೊಬ್ಬ | ರಿಚ್ಛೆಯಲಿ ನುಡಿಯದಿರು | ನೆಚ್ಚಿ ಒಂದೊರೊಳಗಿರದಿರು ಶಿವ ನಿನ್ನ ಇಚ್ಛೆಯೊಳಗಿಹನು ಸರ್ವಜ್ಞ ||
--------------
ಸರ್ವಜ್ಞ
ಸಾರವನು ಬಯಸುವೊಡೆ | ಕ್ಷಾರವನು ಧರಿಸುವುದು ಮಾರಸಂಹರನ ನೆನೆದರೆ - ಮೃತ್ಯು ತಾ ದೊರಕ್ಕೆ ದೊರ ಸರ್ವಜ್ಞ
--------------
ಸರ್ವಜ್ಞ
ಸುರೆಯ ಸೇವಿಸುವಂಗೆ | ಸಿರಿಗರ್ವಪಚನಂಗೆ | ದೊರೆಯಲ್ಲಿ ತೇಜ ಪಡೆದಂಗೆ ಶಿರವಿಹುದು | ಸ್ಥಿರವಲ್ಲ ನೋಡ ಸರ್ವಜ್ಞ ||
--------------
ಸರ್ವಜ್ಞ
ಸುರೆಯ ಸೇವಿಸುವವನ | ಸುರಿಗೆಯನು ಪಿಡಿದವನ | ದೊರೆಯೊಲುಮೆಗಾಗಿ ಹಣಗುವನಕಾಯುವದು | ಸೊರಗಿಸಾಯುವವು ಸರ್ವಜ್ಞ ||
--------------
ಸರ್ವಜ್ಞ
ಹಾರುವರು ಎಂಬುವರು | ಹಾರುತ್ತಲಿರುತಿಹರು | ಹಾರುವಗೆ ಸಲುಹುವರ ದೊರೆಯೊಡನೆ ನಿಜಗುಣ | ತೋರದಡುಗುವದು ಸರ್ವಜ್ಞ ||
--------------
ಸರ್ವಜ್ಞ
ಹಾಸಾಂಗಿ ಹರೆಯುವಡೆ | ದಾಸಿಯರು ದೊರೆಯುವಡೆ ವೀಸಕ್ಕೆ ವೀಸ ಕೊಡುವಡೆ ಅದು ತನಗೆ | ಈಶನ ಒಲುಮೆ ಸರ್ವಜ್ಞ ||
--------------
ಸರ್ವಜ್ಞ