ಒಟ್ಟು 32 ಕಡೆಗಳಲ್ಲಿ , 1 ವಚನಕಾರರು , 26 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನ್ನದೇವರ ಮುಂದೆ | ಇನ್ನು ದೇವರು ಉಂಟೆ | ಅನ್ನವಿರುವನಕ ಪ್ರಾಣವೀ ಜಗದೊಳಗೆ | ಅನ್ನದೈವ ಸರ್ವಜ್ಞ ||
--------------
ಸರ್ವಜ್ಞ
ಇದ್ದಲಿಂ ಕರಿಯಿಲ್ಲ | ಬುದ್ಢಿಯಿಂ ಹಿರಿದಿಲ್ಲ | ವಿದ್ಯದಿಂದಧಿಕ ಧನವಿಲ್ಲ ದೈವತಾ | ರುದ್ರನಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಉಣಲಡಿಗೆ ಹಲವಾಗಿ | ಕಣಿಕ ತಾನೊಂದಯ್ಯ ಮಣಲೇಸು ದೈವ ಘನವಾಗಿ - ಲೋಕಕ್ಕೆ ತ್ರಿಣಯನ ಸರ್ವಜ್ಞ
--------------
ಸರ್ವಜ್ಞ
ಉಂಬಳಿ ಇದ್ದಂತೆ | ಕಂಬಳಿಯ ಹೊದೆವರೆ ಶಂಭುವಿದ್ದಂತೆ ಮತ್ತೊಂದು - ದೈವವ ನಂಬುವನೆಗ್ಗ ಸರ್ವಜ್ಞ
--------------
ಸರ್ವಜ್ಞ
ಉಂಲಡಿಗೆ ಹಲಾವಾಗಿ | ಕಣಿಕ ತಾನೊಂದಯ್ಯ ಮಣಿಯಿಸಿವೆ ದೈವ ಘನವಾಗಿ ಜಗಕೆಲ್ಲಿ ತ್ರಿಣಯನೇ ದೈವ ಸರ್ವಜ್ಞ ||
--------------
ಸರ್ವಜ್ಞ
ಊರೆಲ್ಲ ನೆಂಟರು | ಕೇರಿಯೆಲ್ಲವು ಬಳಗ | ಧರಣಿಯಲಿ ಎಲ್ಲ ಕುಲದೈವವಾಗಿನ್ನು | ಯಾರನ್ನು ಬಿಡಲಿ ? ಸರ್ವಜ್ಞ ||
--------------
ಸರ್ವಜ್ಞ
ಐವರಟ್ಟಾಸವನ | ಯೌವನದ ಹಿಂಡನ್ನು | ಹೊಯ್ಯುತ್ತ ವಶಕ್ಕೆ ತಂದಾತ ಜಗದೊಳಗೆ | ದೈವ ತಾನಕ್ಕು ಸರ್ವಜ್ಞ ||
--------------
ಸರ್ವಜ್ಞ
ಕುಂದಳಿದವ ದೈವ | ಬಂಧ ಕಳೆದವ ದೈವ | ನೊಂದು ತಾ ನೋಯಿಸದವ ದೈವ ಹುಸಿಯದನೆ | ಇಂದುಧರನೆಂದ ಸರ್ವಜ್ಞ ||
--------------
ಸರ್ವಜ್ಞ
ತರುಕರವು ಇರದೂರು | ನರಕಭಾಜನಮಕ್ಕು | ತರುಕರುಂಟಾದರುಣಲುಂಟು ಜಗವೆಲ್ಲ | ತರುಕರವೇ ದೈವ ಸರ್ವಜ್ಞ ||
--------------
ಸರ್ವಜ್ಞ
ದರುಶನವಾರಿರಃ | ಪುರುಷರು ಮೂವರಿಂ ಪರತತ್ವದಿರವು ಬೇರೆಂದು - ತೋರಿದ ಗುರು ತಾನೆ ದೈವ ಸರ್ವಜ್ಞ
--------------
ಸರ್ವಜ್ಞ
ದೇಶಕ್ಕೆ ಸಜ್ಜನನು | ಹಾಸ್ಯಕ್ಕೆ ಹನುಮಂತ ಕೇಶವ ಭಕ್ತರೊಳಗೆಲ್ಲ - ಮೂರು ಕ ಣ್ಣೇಶನೇ ದೈವ ಸರ್ವಜ್ಞ
--------------
ಸರ್ವಜ್ಞ
ನರರ ಬೇಡುವ ದೈವ | ವರವೀಯ ಬಲ್ಲುದೇ ತಿರಿವವರನಡರಿ ತಿರಿವಂತೆ - ಅದನರೆ ಹರನನೆ ಬೇಡು ಸರ್ವಜ್ಞ
--------------
ಸರ್ವಜ್ಞ
ನಾಲಿಗೆಗೆ ನುಣುಪಿಲ್ಲ | ಹಾಲಿಗಿಂ ಬಿಳಿಪಿಲ್ಲ | ಕಾಲನಿಂದಧಿಕ ಅರಿಯಿಲ್ಲ ದೈವವುಂ | ಶೂಲಿಯಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ನಿದ್ರೆಯಿಂ ಸುಖವಿಲ್ಲ | ಪದ್ರದಿಂ ಅರಿಯಿಲ್ಲ ಮುಖ ಮುದ್ರೆಯಿಂದಧಿಕ ಮಾತಿಲ್ಲ ದೈವವುಂ | ರುದ್ರನಿಂದಿಲ್ಲ | ಸರ್ವಜ್ಞ ||
--------------
ಸರ್ವಜ್ಞ
ನಿಂಬೆಗಿಂ ಹುಳಿಯಿಲ್ಲ | ತುಂಬೆಗಿಂ ಕರಿದಿಲ್ಲ | ನಂಬಿಗೆಯಿಂದಧಿಕ ಗುಣ್ವವಿಲ್ಲ | ದೈವವುಂ | ಶುಭವಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ