ಒಟ್ಟು 20 ಕಡೆಗಳಲ್ಲಿ , 1 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದುವಿನೊಳುರಿಯುಂಟೆ | ಸಿಂಧುವಿನೊಳರಬುಂಟೆ | ಸಂದವೀರನೊಳು ಭಯವುಂಟೇ ? ಭಕ್ತಂಗೆ | ಸಂದೇಹವುಂಟೆ ಸರ್ವಜ್ಞ ||
--------------
ಸರ್ವಜ್ಞ
ಎಲುವಿನ ಕಾಯಕ್ಕೆ | ಸಲೆ ಚರ್ಮವನು ಹೊದಿಸಿ ಮಲ-ಮೂತ್ರ-ಕ್ರಿಮಿಯು ಒಳಗಿರ್ಪ - ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ
--------------
ಸರ್ವಜ್ಞ
ಎಲುವು - ತೊಗಲ್ - ನರ - ಮಾಂಸ | ಬಲಿದ ಚರ್ಮದ ಹೊದಿಕೆ | ಹೊಲೆ - ರಕ್ತ ಶುಕ್ಲದಿಂದಾದ ದೇಹಕ್ಕೆ | ಕುಲವಾವುದಯ್ಯ ಸರ್ವಜ್ಞ ||
--------------
ಸರ್ವಜ್ಞ
ದೇಹ ದೇವಾಲಯವು | ಜೀವವೇ ಶಿವಲಿಂಗ | ಬಾಹ್ಯಾಂಗಳಳಿದು ಭಜಿಪಂಗೆ ಮುಕ್ತಿಸಂ ದೇಹವಿಲ್ಲೆಂದು ಸರ್ವಜ್ಞ ||
--------------
ಸರ್ವಜ್ಞ
ದೇಹಿಯೆನಬೇಡ ನಿ | ದೇಹಿ ಜಂಗಮ ದೇವ ದೇಹಗುಣದಾಶೆಯಳಿದರೆ - ಆತ ನಿ ದೇಹಿ ಕಂಡಯ್ಯ ಸರ್ವಜ್ಞ
--------------
ಸರ್ವಜ್ಞ
ಧಾತು ಏಳನು ಕಲೆತು | ಭೂತಪಂಚಕವಾಗಿ | ಓತು ದೇಹವನು ಧರಿಸಿರ್ದ ಮನುಜರ್ಗೆ | ಜಾತಿಯತ್ತಣದು ಸರ್ವಜ್ಞ ||
--------------
ಸರ್ವಜ್ಞ
ನೆತ್ತವೂ ಕುತ್ತವೂ | ಹತ್ತದೊಡೆ ಅಳವಲ್ಲ | ಕುತ್ತದಿಂ ದೇಹ ಬಡದಕ್ಕು ನತ್ತದಿಂ | ಅತ್ತಲೇ ಅಕ್ಕು ಸರ್ವಜ್ಞ ||
--------------
ಸರ್ವಜ್ಞ
ಪಂಚವಿಂಶತಿ ತತ್ವ | ಸಂಚಯದ ದೇಹವನು | ಹಂಚಿಂದು ಕಾಣಲರಿಯದಿರೆ ಭವ ಮುಂದೆ | ಗೊಂಚಲಾಗಿಹದು ಸರ್ವಜ್ಞ ||
--------------
ಸರ್ವಜ್ಞ
ಪಂಚವಿಂಶಶಿತತ್ವ | ಸಂಚದ ದೇಹವನು ಹಂಚೆಂದು ಕಾಣಲರಿಳೆಯದೋಡೆ - ಭವ ಮುಂದೆ ಗೊಂಚಲಾಗಿಹುದು ಸರ್ವಜ್ಞ
--------------
ಸರ್ವಜ್ಞ
ಬೆಂದ ಆವಿಗೆ ಭಾಂಡ | ಒಂದೊಂದು ಭೋಗವನು | ಅಂದದಿಂ ಉಂಡ ಒಡೆದು ಹಂಚಾದಂತೆ | ಬಿಂದುವನು ದೇಹ ಸರ್ವಜ್ಞ ||
--------------
ಸರ್ವಜ್ಞ
ಬೆಂದಾವಿಗೆಯ ಭಾಂಡ | ಒಂದೊಂದು ಭೋಗವನು ಅಂದಂದಿಗುಂಡು ಒಡೆದು ಹಂಚಾದಂತೆ ಬಿಂದುವಿನ ದೇಹ ಸರ್ವಜ್ಞ
--------------
ಸರ್ವಜ್ಞ
ಮಲವು ದೇಹದಿ ಸೋರಿ | ಹೊಲಸು ಮಾಂಸದಿ ನಾರಿ | ಹೊಲೆ ವಿಲದ ಹೇಯ ದೇಹದಲಿ ಹಾರುವರು | ಕುಲವನೆಣಿಸುವರೆ ಸರ್ವಜ್ಞ ||
--------------
ಸರ್ವಜ್ಞ
ಮುಟ್ಟು ಗಂಡವಳನ್ನು | ಮುಟ್ಟಲೊಲ್ಲರು ನೋಡು | ಮುಟ್ಟು ತಾ ತಡೆದು ಹುಟ್ಟಿರ್ದ ದೇಹವನು | ಮುಟ್ಟುತಿಹರೇಕೆ ಸರ್ವಜ್ಞ ||
--------------
ಸರ್ವಜ್ಞ
ವ್ಯಸನ ದೇಹ | ಮಸಣವನು ಕಾಣುವದು | ವ್ಯಸನವನು ಬಿಟ್ಟು ಹಸನಾಗಿ ದುಡಿದರೆ | ಅಶನ - ವಸನಗಳು ಸರ್ವಜ್ಞ ||
--------------
ಸರ್ವಜ್ಞ
ಹಸಿಯದಿರೆ ಕಡುಗಾಯ್ದು | ಬಿಸಿನೀರ ಕುಡಿಯುವದು | ಹಸಿವಕ್ಕು ಸಿಕ್ಕ _ ಮಲವಕ್ಕು ದೇಹವದು | ಸಸಿಯಾಗಿಹುದು ಸರ್ವಜ್ಞ ||
--------------
ಸರ್ವಜ್ಞ