ಒಟ್ಟು 6 ಕಡೆಗಳಲ್ಲಿ , 1 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಪ್ಪೊತ್ತು ದೇವರನು | ತಪ್ಪದಲೆ ನೆನದಿಹರೆ | ತುಪ್ಪ ಒರಗವು ಉಣಲುಂಟು ತನಗೊಬ್ಬ | ಳಪ್ಪುವಳುಂಟು ಸರ್ವಜ್ಞ ||
--------------
ಸರ್ವಜ್ಞ
ಗಾಳಿ-ಧೂಳಿಯ ದಿನಕೆ | ಮಾಳೀಗೆ ಮನೆ ಲೇಸು | ಹೊಳೀಗೆಯು ತುಪ್ಪ ಉಣಲೇಸು ಬಾಯಿಗಂ | ವೀಳ್ಯವೇ ಲೇಸು ಸರ್ವಜ್ಞ ||
--------------
ಸರ್ವಜ್ಞ
ತುಪ್ಪ ಒಗರ ಲೇಸು | ಉಪ್ಪರಿಗೆ ಮನೆ ಲೇಸು | ಅಪ್ಪ ಬಾರೆಂಬ ಮಗ ಲೇಸು ಊರೊಳಗೆ | ಶಿಂಪಿಗನು ಲೇಸು | ಸರ್ವಜ್ಞ ||
--------------
ಸರ್ವಜ್ಞ
ತುಪ್ಪವಾದಾ ಬಳಿಕ | ಹೆಪ್ಪನೆರೆದವರುಂಟೆ ನಿಃಪತಿಯಾದ ಗುರುವಿನುಪದೇಶದಿಂ ತಪ್ಪದೇ ಮುಕ್ತಿ ಸರ್ವಜ್ಞ
--------------
ಸರ್ವಜ್ಞ
ಮಜ್ಜಿಗೂಟಕೆ ಲೇಸು | ಮಜ್ಜನಕೆ ಮಡಿ ಲೇಸು | ಕಜ್ಜಾಯ ತುಪ್ಪ ಉಣ ಲೇಸು | ಮನೆಗೊಬ್ಬ ಅಜ್ಜಿ ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ಹುತ್ತು ಹಾವಿಗೆ ಲೇಸು | ಮುತ್ತು ಕೊರಳಿಗೆ ಲೇಸು | ಕತ್ತೆಯಾ ಹೇರುತರ ಲೇಸು | ತುಪ್ಪದಾ | ತುತ್ತು ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ