ಒಟ್ಟು 6 ಕಡೆಗಳಲ್ಲಿ , 1 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎತ್ತ ಹೋದರು ಒಂದು | ತುತ್ತು ಕಟ್ಟಿರಬೇಕು | ತುತ್ತೊಂದು ಗಳಿಗೆ ತಡೆದಿಹರೆ ಕೈ ಹಿಡಿದು | ಎತ್ತಬೇಕೆಂದ ಸರ್ವಜ್ಞ ||
--------------
ಸರ್ವಜ್ಞ
ತಿತ್ತಿ ಹೊಟ್ಟೆಗೆ ಒಂದು | ತುತ್ತು ತಾ ಹಾಕುವದು | ತುತ್ತೆಂಬ ಶಿವನ ಬಿಟ್ಟಿಹರೆ ಸುಡುಗಾಡಿ | ಗೆತ್ತಬೇಕೆಂದ ಸರ್ವಜ್ಞ ||
--------------
ಸರ್ವಜ್ಞ
ತುತ್ತು ತುತ್ತಿಗೆ ಹೊಟ್ಟೆ | ತಿತ್ತಿಯಂತಾಗುವದು | ತುತ್ತು ಅರಗಳಿಗೆ ತಡೆದಿಹರೆ ಹೆಡೆಹಾವು ಹುತ್ತು ಬಿಟ್ಟಂತೆ ಸರ್ವಜ್ಞ ||
--------------
ಸರ್ವಜ್ಞ
ಹುತ್ತ ಹಿತ್ತಲು ಹೊಲ್ಲ | ಬೆತ್ತ ಭೂತಕೆ ಹೊಲ್ಲ | ಒತ್ತೆಗೊಂಬಳಿಗೆ ತುರಿ ಹೊಲ್ಲ ಒಣಕೂಳ | ತುತ್ತು ತಾ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಹುತ್ತು ಹಾವಿಗೆ ಲೇಸು | ಮುತ್ತು ಕೊರಳಿಗೆ ಲೇಸು | ಕತ್ತೆಯಾ ಹೇರುತರ ಲೇಸು | ತುಪ್ಪದಾ | ತುತ್ತು ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ