ಒಟ್ಟು 13 ಕಡೆಗಳಲ್ಲಿ , 1 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಲ್ಲದಾ ಮಾಯೆಯದು | ಎಲ್ಲಿಂದಲೆನಹದಲೆ | ಬಲ್ಲಿತದು ಮಾಯೆಯೆನಬೇಡ | ತಿಳಿಯಲ್ಕೆ ಎಲ್ಲಿಹುದು ? ಮಾಯೆ ಸರ್ವಜ್ಞ ||
--------------
ಸರ್ವಜ್ಞ
ಕೆಟ್ಟಹಾಲಿಂದ ಹುಳಿ | ಯಿಟ್ಟಿರ್ದ ತಿಳಿಲೇಸು | ಕೆಟ್ಟ ಹಾರುವವನ ಬದುಕಿಂದ ಹೊಲೆಯನು | ನೆಟ್ಟನೇ ಲೇಸು ಸರ್ವಜ್ಞ ||
--------------
ಸರ್ವಜ್ಞ
ಜಾರಿ ನೆರೆ ಸೇರುವಗೆ | ತೂರರೊಳು ಹೋರುವಗೆ | ಊರಿರುಳ ನಾರಿ ಕಳುವಂಗೆ ತಿಳಿಯದಲೆ | ಮಾರಿ ಬಂದಿಹುದು ಸರ್ವಜ್ಞ ||
--------------
ಸರ್ವಜ್ಞ
ಜೀವ ಜೀವವ ತಿಂದು | ಜೀವಿಗಳ ಹುಟ್ಟಿಸಿರೆ | ಸಾವು ಎಲ್ಲಿಹುದು ಸ್ವಾರ್ಥವೆ ಜಗದೊಳಗೆ | ಸಾವೆಂದು ತಿಳಿಯೋ ಸರ್ವಜ್ಞ ||
--------------
ಸರ್ವಜ್ಞ
ನಿದ್ದೆಗಳು ಬಾರದವು | ಬುದ್ಧಿಗಳೂ ತಿಳಿಯುವವು | ಮುದ್ದಿನ ಮಾತುಗಳು ಸೊಗಸದದು ಬೋನದಾ | ಮುದ್ದೆ ತಪ್ಪಿದರೆ ಸರ್ವಜ್ಞ ||
--------------
ಸರ್ವಜ್ಞ
ನೀರ ಬೊಬ್ಬಳಿನೆಚ್ಚಿ | ಸಾರಿ ಕೆಡದಿರು ಮರುಳೆ | ಸಾರುಗುಣಿಯಾಗು ನಿಜವ ತಿಳಿ ಸರುವರೊಳು | ಕಾರುಣಿಕನಾಗು ಸರ್ವಜ್ಞ ||
--------------
ಸರ್ವಜ್ಞ
ಬೆಳೆದೆನವರಿಂದೆನ್ನ | ಕಳೆಯ ಕಂಡವರೆಲ್ಲ ಮೊಳೆಯಲ್ಲಿ ಸಸಿಯನರಿವಂತೆ - ಮಾಳಿಯ ತಿಳಿದವರರೆಗು ಸರ್ವಜ್ಞ
--------------
ಸರ್ವಜ್ಞ
ಬ್ರಹ್ಮ ಗಡ | ಸ್ಥಿತಿಗೆ ಆ ವಿಷ್ಣು ಗಡ ಹತವ ಮಾಡುವಡೆ ರುದ್ರ ಗಡ - ಎಂದೆಂಬ ಸ್ಥಿತಿಯ ತಿಳಿಯೆಂದ ಸರ್ವಜ್ಞ
--------------
ಸರ್ವಜ್ಞ
ಮನದಲ್ಲಿ ನೆನವಿಠಲಿ | ತನುವೊಂದು ಮಠವಕ್ಕು | ಮನಹೋಗಿ ಹಲವ ನೆನೆದಿಹರೆ ಅದು ಹಾಳು | ಮನೆಯೆಂದು ತಿಳಿಯೋ ಸರ್ವಜ್ಞ ||
--------------
ಸರ್ವಜ್ಞ
ಸತ್ತು ಹೋದರ್‍ಎ ನಿನಗೆ | ಎತ್ತಣವು ಮೋಕ್ಷವೈ ? ಸತ್ತು ಹೋಗದರೆ ಜೀವಿಸಲು ಮೋಕ್ಷದಾ | ಗೊತ್ತು ತಿಳಿಯೆಂದ ಸರ್ವಜ್ನ್ಯ ||
--------------
ಸರ್ವಜ್ಞ
ಹಂಗಿನಾ ಹಾಲಿನಿಂ | ದಂಬಲಿಯ ತಿಳಿ ಲೇಸು | ಭಂಗಬಟ್ಟುಂಬ ಬಿಸಿಯಿಂದ ತಿರಿವವರ | ತಂಗುಳವೆ ಲೇಸು ಸರ್ವಜ್ಞ ||
--------------
ಸರ್ವಜ್ಞ
ಹಂದಿ ಚಂದನಸಾರ | ಗಂಧವ ಬಲ್ಲುದೇ ಒಂದುವ ತಿಳಿಯಲರಿಯದನ - ಗುರುವಿಗೆ ನಿಂದ್ಯವೇ ಬಹುದು ಸರ್ವಜ್ಞ
--------------
ಸರ್ವಜ್ಞ
ಹೊಲಬನರಿಯದ ಗುರುವು | ತಿಳಿಯಲರಿಯದ ಶಿಷ್ಯ ನೆಲೆಯನಾರಯ್ಯದುಪದೇಶ - ವಂಧಕನು ಕಳನ ಹೊಕ್ಕಂತೆ ಸರ್ವಜ್ಞ
--------------
ಸರ್ವಜ್ಞ