ಒಟ್ಟು 6 ಕಡೆಗಳಲ್ಲಿ , 1 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಸು ವೆಚ್ಚಕೆ ಲೇಸು | ದೋಸೆ ಹಾಲಿಗೆ ಲೇಸು | ಕೂಸಿಂಗೆ ತಾಯಿ ಇರಲೇಸು ಹರೆಯದಗೆ | ಮೀಸೆ ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ತಂದೆ ಹಾರುವನಲ್ಲ | ತಾಯಿ ಮಾಳಿಯು ಅಲ್ಲ ಚಂದ್ರಶೇಖರನ ವರಪುತ್ರ - ನಾ ನಿಮ್ಮ ಕಂದನಲ್ಲೆಂಬೆ ಸರ್ವಜ್ಞ
--------------
ಸರ್ವಜ್ಞ
ತಂದೆ-ತಾಯಿಗಳ ಘನ | ದಿಂದ ವಂದಿಸುವಂಗೆ | ಬಂದ ಕುತುಗಳು ಬಯಲಾಗಿ ಸ್ವರ್ಗವದು | ಮುಂದೆ ಬಂದಕ್ಕು ಸರ್ವಜ್ಞ ||
--------------
ಸರ್ವಜ್ಞ
ನಿದ್ದೆಯಲಿ ಬುದ್ಧಿಲ್ಲ ಭದ್ರೆಗಂ ತಾಯಿಲ್ಲ | ಕದ್ದು ಕೊಂಬಂಗೆ ಬದುಕಿಲ್ಲ | ಮರಣಕ್ಕೆ ಮದ್ದುಗಳೆ ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ವಿದ್ಯೆ ಕಲಿಸದ ತಂದೆ | ಬುದ್ಧಿ ಹೇಳದ ಗುರುವು | ಬಿದ್ದಿರಲು ಬಂದ ನೋಡದಾ ತಾಯಿಯೂ | ಶುದ್ಧ ವೈರಿಗಳು ಸರ್ವಜ್ಞ ||
--------------
ಸರ್ವಜ್ಞ
ಹಲವು ಸಂಗದ ತಾಯಿ | ಹೊಲಸು ನಾರುವ ಬಾಯಿ | ಸಲೆ ಸ್ಮರಹರನ ನೆನೆಯದಾ ಬಾಯಿ ನಾಯ್ | ಮಲವ ಮೆದ್ದಂತೆ ಸರ್ವಜ್ಞ ||
--------------
ಸರ್ವಜ್ಞ