ಒಟ್ಟು 9 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇತ್ತುದನು ಈಯದನ | ಮೃತ್ಯುವೊಯ್ಯುದೆ ಬಿಡದು ಹತ್ತಿರ್ದ ಲಕ್ಷ್ಮಿ ತೊಲಗಿ ಹುಟ್ಟುವನವನ | ತೊತ್ತಾಗಿ ಮುಂದೆ ಸರ್ವಜ್ಞ ||
--------------
ಸರ್ವಜ್ಞ
ಎತ್ತಾಗಿ ತೊತ್ತಾಗಿ | ಹಿತ್ತಿಲದ ಗಿಡವಾಗಿ ಮತ್ತೆ ಪಾದದ ಕೆರವಾಗಿ - ಗುರುವಿನ ಹತ್ತಿಲಿರು ಎಂದು ಸರ್ವಜ್ಞ
--------------
ಸರ್ವಜ್ಞ
ತಾಗಿ ಬಾಗುವದರಿಂ | ತಾಗದಿಹುದು ಲೇಸು | ತಾಗಿ ಮೂಗೊಡದು ಬುಗುಟಿದ್ದು ಬಾಗುವದು | ಹೇಗನಾ ಗುಣವು ಸರ್ವಜ್ಞ ||
--------------
ಸರ್ವಜ್ಞ
ತಾಗುವಾ ಮುನ್ನವೇ ಬಾಗುವಾ ತಲೆ ಲೇಸು | ತಾಗಿ ತಲೆಯೊಡೆದು ಕೆಲಸವಾದ ಬಳಿಕದರ | ಭೋಗವೇನೆಂದ ಸರ್ವಜ್ಞ ||
--------------
ಸರ್ವಜ್ಞ
ಹರಗದ ಎತ್ತಾಗಿ | ಬರಡದ ಹಯನಾಗಿ | ಹರಟೆ ಹೊಡೆಯುವಾ ಮಗನಾಗಿ ಹೊಲದಲ್ಲಿ | ಕರಡವೇ ಬೆಳಗು ಸರ್ವಜ್ಞ ||
--------------
ಸರ್ವಜ್ಞ
ಹುಸಿವಾತ ದೇಗುಲದ | ದೆಸೆಯತ್ತ ಮುಂತಾಗಿ | ನೊಸಲೆತ್ತಿ ಕರವ ಮುಗಿದಿಹರೆ | ಅಷ್ಟುದ್ದ ಹರಿವನೆಂದರಿಗು ಸರ್ವಜ್ಞ ||
--------------
ಸರ್ವಜ್ಞ
ಹೊತ್ತಿಗೊದಗಿದೆ ಮಾತು ಸತ್ತವನು ಎದ್ದಂತೆ | ಹೊತ್ತಾಗಿ ನುಡಿದ ಮಾತು ಕೈಜಾರಿದಾ | ಮುತ್ತಿನಂತಿಹುದು ಸರ್ವಜ್ಞ ||
--------------
ಸರ್ವಜ್ಞ