ಒಟ್ಟು 12 ಕಡೆಗಳಲ್ಲಿ , 1 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಗಲೇಳು ಸಾಸಿರವು | ಮುಗಿಲು ಮುಟ್ಟುವಕೋಟೆ | ಹಗಲೆದ್ದು ಹತ್ತು ತಲೆಯಾತ ಪರಸತಿಯ | ನೆಗೆದು ತಾ ಕೆಟ್ಟ ಸರ್ವಜ್ಞ ||
--------------
ಸರ್ವಜ್ಞ
ಈರೈದು ತಲೆಯುಳ್ಳ | ಧೀರ ರಾವಣ ಮಡಿದ | ವೀರ ಕೀಚಕನು ಗಡೆ ಸತ್ತು ಪರಸತಿಯ | ದಾರಿ ಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಉದ್ದುರುಟು ಮಾತಾಡಿ | ಇದುದನು ಹೋಗಾಡಿ | ಉದ್ದನಾ ಮರವ ತುದಿಗೇರಿ ತಲೆಯೂರಿ | ಬಿದ್ದು ಸತ್ತಂತೆ ಸರ್ವಜ್ಞ ||
--------------
ಸರ್ವಜ್ಞ
ಎಂಟೆರಡು ತಲೆಯುಳ್ಳ | ಬಂಟ ರಾವಣ ಕೆಟ್ಟ | ತುಂತ ಕೀಚಕನು ಹೊರಹೊಂಟ ಪರಸತಿಯ | ನಂಟು ಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಕತ್ತಲೆಯ ಠಾವಿಂಗೆ | ಉತ್ತಮವು ಜ್ಯೋತಿ ತಾ| ಮತ್ತೆ ಪ್ರಜ್ವಲಿಸುವ ಠಾವು ಬೆಳಗಲು | ತ್ಯುತ್ತಮವಕ್ಕುದು ಸರ್ವಜ್ನ್ಯ ||
--------------
ಸರ್ವಜ್ಞ
ಕತ್ತೆಯೇರಲು ಹೊಲ್ಲ | ತೊತ್ತು ಸಂಗವು ಹೊಲ್ಲ | ಬತ್ತಲೆಯ ಜಲವ ಹೊಗಹೊಲ್ಲ ಇವುಗಳಲ್ಲಿ | ಅತ್ಯಂತ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಕೊಲು ಧರ್ಮಗಳ - ನೊಯ್ದು | ಒಲೆಯೊಳಗೆ ಇಕ್ಕುವಾ | ಕೊಲಲಾಗದೆಂಬ ಜೈನನಾ ಮತವೆನ್ನ | ತಲೆಯ ಮೇಲಿರಲಿ ಸರ್ವಜ್ಞ ||
--------------
ಸರ್ವಜ್ಞ
ತಳಿಗೆಗಂ ತಲೆಯಿಲ್ಲ | ಮಳೆಗೆ ಜೋಯಿಸರಿಲ್ಲ | ಬೆಳಗಾಗೆ ಕನ್ನಗಳವಿಲ್ಲ ಲೋಕದೊಳು | ಉಳಿದಾಳ್ಗಳಿಲ್ಲ ಸರ್ವಜ್ಞ ||
--------------
ಸರ್ವಜ್ಞ
ತಾಗುವಾ ಮುನ್ನವೇ ಬಾಗುವಾ ತಲೆ ಲೇಸು | ತಾಗಿ ತಲೆಯೊಡೆದು ಕೆಲಸವಾದ ಬಳಿಕದರ | ಭೋಗವೇನೆಂದ ಸರ್ವಜ್ಞ ||
--------------
ಸರ್ವಜ್ಞ
ಪರಸ್ತ್ರೀಯ ಗಮನದಿಂ | ಪರಲೋಕವದು ಹಾನಿ | ಸಿರಿತಗ್ಗಿ ತಲೆಯು ತೊಲಗಿತಾ ರಾವಣಗೆ | ನರಲೋಕದಲ್ಲಿ ಸರ್ವಜ್ಞ ||
--------------
ಸರ್ವಜ್ಞ
ಹಲವು ಮಕ್ಕಳ ತಂದೆ | ತಲೆಯಲ್ಲಿ ಜುಟ್ಟವದೆ | ಸತಿಗಳಿಗೆ ಜಾವವರಿವವನ ಹೆಂಡತಿಗೆ ಮೊಲೆಯಿಲ್ಲ ನೋಡಾ ಸರ್ವಜ್ಞ ||
--------------
ಸರ್ವಜ್ಞ
ಹೊತ್ತಾರೆ ನೆರೆಯುವದು | ಹೊತ್ತೇರಿ ಹರಿಯುವದು | ಕತ್ತಲೆಯ ಬಣ್ಣ ಮಿಗಿಲಾಗಿ ಮಳೆಗಾಲ | ವೆತ್ತಣದಯ್ಯ ಸರ್ವಜ್ಞ ||
--------------
ಸರ್ವಜ್ಞ