ಒಟ್ಟು 10 ಕಡೆಗಳಲ್ಲಿ , 1 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪ್ಪ ಹಾಕಿದ ಗಿಡವು | ಒಪ್ಪುತ್ತಲಿರುತಿರಲು | ತಪ್ಪಿಲ್ಲವೆಂದು ಅದನೇರಿ ಮಗನುರ್ಲ | ಗೊಪ್ಪಿಕೊಳ್ಳುವನೆ ಸರ್ವಜ್ಞ ||
--------------
ಸರ್ವಜ್ಞ
ಉತ್ತರೆಯು ಬರದಿಹರೆ | ಹೆತ್ತ ತಾಯ್ತೊರೆದರೆ | ಸತ್ಯವಂ ತಪ್ಪಿ ನಡೆದರೀಲೋಕ ವಿ | ನ್ನೆತ್ತ ಸೇರುವದು ಸರ್ವಜ್ಞ ||
--------------
ಸರ್ವಜ್ಞ
ಕೂಡಿ ತಪ್ಪಲು ಬೇಡ | ಓಡಿ ಸಿಕ್ಕಲು ಬೇಡ | ಆಡಿ ತಪ್ಪಿದರೆ ಇರಬೇಡ ದುರುಳರು | ಕೂಡಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ತಪ್ಪು ಮಾಡಿದವಂಗೆ | ಒಪ್ಪುವದು ಸಂಕೋಲೆ ತಪ್ಪಿಲ್ಲದಿಪ್ಪ | ಶರಣಂಗೆ ಸಂಕೋಲೆ ಬಪ್ಪುದದೇಕೆ ಸರ್ವಜ್ಞ ||
--------------
ಸರ್ವಜ್ಞ
ತೆಪ್ಪವನ್ನು ನಂಬಿದಡೆ | ತಪ್ಪದಲೆ ತಡಗಹದು | ಸರ್ಪಭೂಷಣನ ನಂಬಿದಡೆ ಭವಪಾಶ | ತಪ್ಪಿ ಹೋಗುವುದು ಸರ್ವಜ್ಞ ||
--------------
ಸರ್ವಜ್ಞ
ನಿದ್ದೆಗಳು ಬಾರದವು | ಬುದ್ಧಿಗಳೂ ತಿಳಿಯುವವು | ಮುದ್ದಿನ ಮಾತುಗಳು ಸೊಗಸದದು ಬೋನದಾ | ಮುದ್ದೆ ತಪ್ಪಿದರೆ ಸರ್ವಜ್ಞ ||
--------------
ಸರ್ವಜ್ಞ
ನುಡಿಯಲ್ಲಿ ಎಚ್ಚತ್ತು | ನಡೆಯಲ್ಲಿ ತಪ್ಪಿದರೆ | ಹಿಡಿದಿರ್ಧ ಧರ್ಮ ಹೊಡೆಮರಳಿ ಕಚ್ಚುವಾ | ಹೆಡೆನಾಗನೋಡು ಸರ್ವಜ್ಞ ||
--------------
ಸರ್ವಜ್ಞ
ನೇತ್ರಗಳು ಕಾಣಿಸವು | ಶ್ರೋತ್ರಗಳು ಕೇಳಿಸವು | ಗಾತ್ರಗಲು ಎದ್ದು ನಡೆಯುವವು ಕೂಳೊಂದು | ರಾತ್ರಿ ತಪ್ಪಿದರೆ ಸರ್ವಜ್ಞ ||
--------------
ಸರ್ವಜ್ಞ
ಪ್ರಸ್ತಕ್ಕೆ ನುಡಿದಿಹರೆ | ಬೆಸ್ತಂತೆ ಇರಬೇಕು | ಪ್ರಸ್ತವನು ತಪ್ಪಿ ನುಡಿದಿಹರೆ | ನಡುಬೆನ್ನಿ ನಸ್ತಿ ಮುರಿದಂತೆ ಸರ್ವಜ್ಞ ||
--------------
ಸರ್ವಜ್ಞ
ಸಪ್ಪನ್ನ ಉಣಹೊಲ್ಲ | ಮುಪ್ಪು ಬಡವಗೆ ಹೊಲ್ಲ | ತಪ್ಪಿನಲಿಸಿಲುಕಿ ಇರಹೊಲ್ಲ ಜಾರೆಯನು ಅಪ್ಪುವದೆ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ