ಒಟ್ಟು 16 ಕಡೆಗಳಲ್ಲಿ , 1 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈಶ ಭಕ್ತನು ಆಗಿ | ವೇಶಿಯನು ತಾ ಹೋಗೆ | ಸಲಾಗಿರ್ದ ಭೋನವನು ಹಂದಿ ತಾ ಮೂಸಿ ಹೋದಂತೆ ಸರ್ವಜ್ಞ ||
--------------
ಸರ್ವಜ್ಞ
ಎಂಜಲೆಂಜಲು ಎಂದು | ಅಂಜುವರು ಹಾರುವರು | ಎಂಜಲಿಂದಾದ ತನುವಿರಲು ಅದನರಿದು | ಅಂಜಿತಿಹರೇಕೆ ಸರ್ವಜ್ಞ ||
--------------
ಸರ್ವಜ್ಞ
ಕೂಳಿಲ್ಲದವನೊಡಲು | ಹಾಳುಮನೆಯಂತಕ್ಕು | ಹೇಳಿದಲೆ ಹೋಗಲು ರುಜೆಗಳಿಂ ತನುವೊಡೆದು | ಹಾಳೆಯಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ತಾಪದ ಸಂಸಾರ | ಕೊಪದಲಿ ಬಿಳ್ದವರು ಆಪತ್ತನುಳಿದು ಪೊರಮಡಲು - ಗುರುಪಾದ ಸೋಪಾನ ಕಂಡು ಸರ್ವಜ್ಞ
--------------
ಸರ್ವಜ್ಞ
ಬಾಲ್ಯ - ಯೌವನ ಪ್ರೌಢ | ಲೋಲ ಹಲವಾದ ತನು ಏಳುತ್ತ ಮಡುವುತಿರ ಬೇಡ - ಅನುದಿನವು ಶೊಲಿಯ ನೆನೆಯ ಸರ್ವಜ್ಞ
--------------
ಸರ್ವಜ್ಞ
ಮನದಲ್ಲಿ ನೆನವಿಠಲಿ | ತನುವೊಂದು ಮಠವಕ್ಕು | ಮನಹೋಗಿ ಹಲವ ನೆನೆದಿಹರೆ ಅದು ಹಾಳು | ಮನೆಯೆಂದು ತಿಳಿಯೋ ಸರ್ವಜ್ಞ ||
--------------
ಸರ್ವಜ್ಞ
ಮನವು ಮುಟ್ಟಲು ಗಂಡು | ತನವು ಸೋಂಕಲು ಪಾಪ ಮನವೇಕದಿಂದ ಗುರುಚರಣ - ಸೋಂಕಿದೊಡೆ ತನು ಶುದ್ದವಯ್ಯ ಸರ್ವಜ್ಞ
--------------
ಸರ್ವಜ್ಞ
ಮನವೆಂಬ ಮರ್ಕಟವು | ತನುವೆಂಬ ಮರನೇರಿ ತಿನುತಿಹುದು ವಿಷಯ ಫಲಗಳನು | ಕರುಣೆ ನೀ ತನುಮನ ಕಾಯೋ ಸರ್ವಜ್ನ್ಯ ||
--------------
ಸರ್ವಜ್ಞ
ಮಾತನರಿದಾ ಸುತನು | ರೀತಿಯರಿದಾ ಸತಿಯು | ನೀತಿಯನು ಅರಿತ ವಿಪ್ರತಾ ಜಗದೊಳಗೆ | ಜ್ಯೋತಿಯಿದ್ದಂತೆ ಸರ್ವಜ್ಞ ||
--------------
ಸರ್ವಜ್ಞ
ಮುನ್ನ ಪೂರ್ವದಲಾನು | ಪನ್ನಗಧರನಾಳು ಎನ್ನಯ ಪೆಸರು ಪುಷ್ಪದತ್ತನು-ಎಂದು ಮನ್ನಿಪರು ನೋಡ ಸರ್ವಜ್ಞ
--------------
ಸರ್ವಜ್ಞ
ರುದ್ರಕರ್ತನು ತಾನು | ಅರ್ಧನಾರಿಯು ಆದ ಇದ್ದವರೊಳಾರು ಸತಿಯರಾ ಹೃದಯವನು | ಗೆದ್ದವನು ಆರು ಸರ್ವಜ್ಞ ||
--------------
ಸರ್ವಜ್ಞ
ಸಂತೆಯಾ ಮನೆ ಹೊಲ್ಲ | ಚಿಂತೆಯಾತನು ಹೊಲ್ಲ | ಎಂತೊಲ್ಲದವಳ ರತಿ ಹೊಲ್ಲ | ಬಾಳುವವಗಂತಕನೆ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಸುರುತರುವು ಸುರಧೇನು | ಸುರಮಣೆ ಸೌರಲತೆ ಪರುಷಷ್ಟತನುವು ಹರಿವ ನದಿ - ಯೆಲ್ಲವು ಪರಮನಿಂ ಜನನ ಸರ್ವಜ್ಞ
--------------
ಸರ್ವಜ್ಞ
ಹಿರಿಯ ಬೊಮ್ಮನು ಕೆಂಚ | ಹಿರಿಯ ಹರಿ ತಾ ಕರಿಕ ಪುರಹರನು ಶುದ್ಧ ಧವಳಿತನು - ಇರೆ ಬೇರೆ ಹರಗೆ ಸರಿಯಹರೀ ಸರ್ವಜ್ಞ
--------------
ಸರ್ವಜ್ಞ
ಹೊಲಸು ಮಾಂಸದ ಹುತ್ತ | ಎಲುವಿನ ಹಂಜರವು ಹೊಲೆ ಬಲಿದು ತನುವಿನೊಳಗಿರ್ದು - ಮತ್ತದರಿ ಕುಲವನೆಣೆಸುವರೆ ಸರ್ವಜ್ಞ
--------------
ಸರ್ವಜ್ಞ