ಒಟ್ಟು 8 ಕಡೆಗಳಲ್ಲಿ , 1 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಟು ಹಣವುಳ್ಳ ತನಕ | ಬಂಟನಂತಿರುತಿಕ್ಕು | ಎಂಟು ಹಣ ಹೋದ ಮರುದಿನವೆ ಹುಳುತಿಂದ | ದಂತಿನಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ಕುಂಭಕ್ಕೆ ಗುರು ಬರಲು | ತುಂಬುವವು ಕೆರೆ - ಭಾವಿ | ಅಂಬರದ ತನಕ ಬೆಳೆಯಕ್ಕು ಲೋಕಕ್ಕೆ | ಸಂಭ್ರಮಕ್ಕು ಸರ್ವಜ್ಞ ||
--------------
ಸರ್ವಜ್ಞ
ಕೂಳು ಹೋಗುವ ತನಕ | ಗೂಳಿಯಂತಿರುತಿಕ್ಕು | ಕೂಳು ಹೋಗದಾ ಮುದಿ ಬರಲು ಮನುಜನವ | ಮೂಳನಾಯಕ್ಕು ಸರ್ವಜ್ಞ ||
--------------
ಸರ್ವಜ್ಞ
ಜೋಳವಾಳಿಯು ಹೊಲ್ಲ ಕೀಳಿನೊಳ ಇರಹೊಲ್ಲ | ಹೇಳದೌತನಕ್ಕೆ ಬರಹೊಲ್ಲ ಕೊಂಡೆಯನ | ಗಾಳಿಯೇ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ನಾಲ್ಕು ಹಣವುಳ್ಳತನಕ | ಪಾಲ್ಕಿಯಲಿ ಮೆರೆದಿಕ್ಕು | ನಾಲ್ಕು ಹಣ ಹೋದ ಮರುದಿನವೆ ಕೋಳದಲಿ ಸಿಲ್ಕಿದಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ನ್ಯಾಯದಲಿ ನಡೆದು ಅ | ನ್ಯಾಯವೇಬಂದಿಹುದು | ನಾಯಿಗಳು ಆರು ಇರುವತನಕ ನರರೊಂದು | ನಾಯಿ ಹಿಂಡೆಂದ ಸರ್ವಜ್ಞ ||
--------------
ಸರ್ವಜ್ಞ
ಮಡದಿ ಮಕ್ಕಳ ಮಮತೆ | ಒಡಲೊಡನೆ ಯಿರುವತನಕ | ಓದಲೊಡವೆ ಹೋದ ಮರುದಿನವೆ ಅವರೆಲ್ಲ | ಕಡೆಗೆ ಸಾರುವರು ಸರ್ವಜ್ಞ ||
--------------
ಸರ್ವಜ್ಞ
ಸಿರಿಯಣ್ಣನುಳ್ಳತನಕ | ಹಿರಿಯಣ್ಣ ನೆನೆಸಿಪ್ಪ | ಸಿರಿಯಣ್ಣ ಹೋದ ಮರುದಿನವೆ ಹಿರಿಯಣ್ಣ | ನರಿಯಣ್ಣನೆಂದ ಸರ್ವಜ್ಞ ||
--------------
ಸರ್ವಜ್ಞ