ಒಟ್ಟು 11 ಕಡೆಗಳಲ್ಲಿ , 1 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತತ್ವದಾ ಜ್ಞಾನತಾ | ನುತ್ತಮವು ಎನಬೇಕು | ಮತ್ತೆ ಶಿವಧ್ಯಾನ ಬೆರೆದರದು | ಶಿವಗಿರಿಂ | ದತ್ತಲೆನಬೇಕು ಸರ್ವಜ್ಞ ||
--------------
ಸರ್ವಜ್ಞ
ತತ್ವಮಸಿ ಹುಸಿದಿಹರೆ | ಮುತ್ತೊಡೆದು ಬೆಸದಿಹರೆ | ಉತ್ತಮರು ಕೆಡಕ ಕಲಿಸಿದರೆ ಲೋಕ ತಾ | ನೆತ್ತ ಸಾಗುವದು ಸರ್ವಜ್ಞ ||
--------------
ಸರ್ವಜ್ಞ
ದರುಶನವಾರಿರಃ | ಪುರುಷರು ಮೂವರಿಂ ಪರತತ್ವದಿರವು ಬೇರೆಂದು - ತೋರಿದ ಗುರು ತಾನೆ ದೈವ ಸರ್ವಜ್ಞ
--------------
ಸರ್ವಜ್ಞ
ಪಂಚವಿಂಶತಿ ತತ್ವ | ಸಂಚಯದ ದೇಹವನು | ಹಂಚಿಂದು ಕಾಣಲರಿಯದಿರೆ ಭವ ಮುಂದೆ | ಗೊಂಚಲಾಗಿಹದು ಸರ್ವಜ್ಞ ||
--------------
ಸರ್ವಜ್ಞ
ಪಂಚವಿಂಶಶಿತತ್ವ | ಸಂಚದ ದೇಹವನು ಹಂಚೆಂದು ಕಾಣಲರಿಳೆಯದೋಡೆ - ಭವ ಮುಂದೆ ಗೊಂಚಲಾಗಿಹುದು ಸರ್ವಜ್ಞ
--------------
ಸರ್ವಜ್ಞ
ಪರತತ್ವ ತನ್ನೊಳಗೆ | ಎರವಿಲ್ಲದಿರುತಿರಲು ಪರದೇಶಿಯಾಗಿ ಇರುತಿರು - ವಾತನ ಪರಮ ಗುರುವೆಂಬೆ ಸರ್ವಜ್ಞ
--------------
ಸರ್ವಜ್ಞ
ಭಿತ್ತಯಾ ಚಿತ್ರದಲಿ | ತತ್ವತಾ ನೆರೆದಿಹುದೆ | ಚಿತ್ರತ್ವ ತನ್ನ ನಿಜದೊಳಗ ತ್ರೈಜಾಗದ | ತತ್ವ ತಾನೆಂದ ಸರ್ವಜ್ಞ ||
--------------
ಸರ್ವಜ್ಞ
ರಾತ್ರಿಯೊಳು ಶಿವರಾತ್ರಿ | ಜಾತ್ರೆಯೊಳು ಶ್ರ್‍ಈಶೈಲ | ಕ್ಷೇತ್ರದೊಳಗಧಿಕ ಶ್ರೀಕಾಶಿ ಶಿವತತ್ವ | ಸ್ತೋತ್ರದೊಳಗಧಿಕ ಸರ್ವಜ್ಞ ||
--------------
ಸರ್ವಜ್ಞ
ಸರ್ವಾಂತರ್ಯಾಮಿ | ಓರ್ವನೆಂಬುವ ತತ್ವ | ನಿರ್ದಿಷ್ಟವಾಗಿ ಇರುತಿರಲು ಮೋಕ್ಷವದು | ಸರ್ವರಿಗೆ ಸುಲಭ ಸರ್ವಜ್ಞ ||
--------------
ಸರ್ವಜ್ಞ
ಹೆರೆಗಳೆಡೆ ಉರಗನನಾ | ಗರಳ ತಾ ತಪ್ಪುವದೆ | ಪರತತ್ವಬೋಧೆಯನರಿಯದಾ ಶ್ರವಣರು | ಸಿರಿಯ ತೊರೆದರೇನು ಸರ್ವಜ್ಞ ||
--------------
ಸರ್ವಜ್ಞ