ಒಟ್ಟು 6 ಕಡೆಗಳಲ್ಲಿ , 1 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕತ್ತಲೆಯ ಠಾವಿಂಗೆ | ಉತ್ತಮವು ಜ್ಯೋತಿ ತಾ| ಮತ್ತೆ ಪ್ರಜ್ವಲಿಸುವ ಠಾವು ಬೆಳಗಲು | ತ್ಯುತ್ತಮವಕ್ಕುದು ಸರ್ವಜ್ನ್ಯ ||
--------------
ಸರ್ವಜ್ಞ
ಜಾತಿಹೀನರ ಮನೆಯ | ಜ್ಯೋತಿ ತಾ ಹೀನವೇ | ಜಾತಿ-ವಿಜಾತಿಯೆನ್ನಬೇಡ ದೇವನೊಲಿ | ದಾತನೇ ಜಾತ ಸರ್ವಜ್ಞ ||
--------------
ಸರ್ವಜ್ಞ
ಜ್ಯೋತಿಯಿಂದವೆ ನೇತ್ರ | ರಾತ್ರಿಯಲಿ ಕಾಂಬಂತೆ ಸೂತ್ರದಲಿ ಧಾತನರೆವಂತೆ - ಶಿವನ ಗುರು ನಾಥನಿಂದರಿಗು ಸರ್ವಜ್ಞ
--------------
ಸರ್ವಜ್ಞ
ಜ್ಯೋತಿಯಿಲ್ಲದ ಮನೆಯು | ರೀತಿಯಿಲ್ಲದ ಸತಿಯು ನಿತಿಯಿಲ್ಲದಾ ವಿಪ್ರನುಂ ಭಿಕ್ಷದಾ | ಪಾತ್ರೆಯೊಡೆದಂತೆ ಸರ್ವಜ್ಞ ||
--------------
ಸರ್ವಜ್ಞ
ಮಾತನರಿದಾ ಸುತನು | ರೀತಿಯರಿದಾ ಸತಿಯು | ನೀತಿಯನು ಅರಿತ ವಿಪ್ರತಾ ಜಗದೊಳಗೆ | ಜ್ಯೋತಿಯಿದ್ದಂತೆ ಸರ್ವಜ್ಞ ||
--------------
ಸರ್ವಜ್ಞ
ಮಾತೆಯಿಂ ಹಿತರಿಲ್ಲಿ | ಕೋತಿಯಿಂ ಮರಳಿಲ್ಲ | ಜ್ಯೋತಿಯಿಂದಧಿಕ ಬೆಳಕಿಲ್ಲ ದೈವವ | ಜಾತನಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ