ಒಟ್ಟು 9 ಕಡೆಗಳಲ್ಲಿ , 1 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದಿಯಲಿ ಜಿನನಿಲ್ಲ | ವೇದದಲಿ ಹುಸಿಯಿಲ್ಲ | ವಾದದಿಂದಾವ ಧನವಿಲ್ಲ ಸ್ವರ್ಗದಿ | ಮಾದಿಗರೆ ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ಎಂತು ಜೀವಿಯ ಕೊಲ್ಲ | ದಂತಿಹುದು ಜಿನಧರ್ಮ | ಜಂತುಗಳ ಹೆತ್ತು ಮರಳಿಯದನೇ ಸಲಹಿ | ದಂತವನೆ ಜೈನ ಸರ್ವಜ್ಞ ||
--------------
ಸರ್ವಜ್ಞ
ಎಂತು ತಪಸಿಗಳಂತೆ | ನಿಂತಫಲಜೀವಿಗಳು | ಜಂತುವಲ್ಲೆಂದು ಜಿನ ತಿಂದು ಮತ್ತದನು | ಸಂತೆಯೊಳು ಇಡುವ ಸರ್ವಜ್ಞ ||
--------------
ಸರ್ವಜ್ಞ
ಎಂತು ಪ್ರಾಣಿ ಕೊಲ್ಲ | ದಂತುಂಟು ಜಿನಧರ್ಮ | ಜಂತು ಬಸುರಲ್ಲಿ ಸಾಯಲು ಆ ಜೀವಿಯು | ಎಂತಾದ ಶ್ರವಣ ಸರ್ವಜ್ಞ ||
--------------
ಸರ್ವಜ್ಞ
ಒಂದು ಜೀವವನೊಂದು | ತಿಂದು ಉಳಿದಿಹಜಗದೊ | ಳೆಂದೂ ಕೊಲಲಾಗದೆಂಬಾ ಜಿನಧರ್ಮ | ನಿಂದಿಹುದು ಹೇಗೆ ಸರ್ವಜ್ಞ ||
--------------
ಸರ್ವಜ್ಞ
ಮಂಜಿನಿಂ ಮಳೆ ಲೇಸು | ಪಂಜು ಇರುಳಲಿ ಲೇಸು | ಪಂಜರವು ಲೇಸು ಅರಗಿಳಿಗೆ ಜಾಡಂಗೆ | ಗಂಜಿ ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ಮೊಸರು ಇಲ್ಲದ ಊಟ | ಪಸರವಿಲ್ಲದ ಕಟಕ | ಹಸನವಿಲ್ಲದಳ ರತಿಕೂಟ ಜಿನನ ಬಾಯ್ | ಕಿಸುಕುಳದಂತೆ ಸರ್ವಜ್ಞ ||
--------------
ಸರ್ವಜ್ಞ
ಸೃಷ್ಟಿಯಲಿ ಜಿನಧರ್ಮ | ಪಟ್ಟಗಟ್ಟಿರುತಿಕ್ಕು | ಕೆಟ್ಟ ಕೆಡಗುಣಗವೆಲ್ಲ ತಲೆಹೋದ | ಅಟ್ಟೆಯಂತಿಕ್ಕು ಸರ್ವಜ್ಞ ||
--------------
ಸರ್ವಜ್ಞ
ಹೇನು ಕೂರೆಗಳನ್ನು | ತಾನಾ ಜಿನಕೊಲ್ಲ | ಸ್ಥಾನ ಪಲ್ಲಟವ ಮಾಡದಡೆ ಆ ಮೇಲೆ | ಏನಾದುದರಿಯ ಸರ್ವಜ್ಞ ||
--------------
ಸರ್ವಜ್ಞ