ಒಟ್ಟು 15 ಕಡೆಗಳಲ್ಲಿ , 1 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಳ್ಳನೂ ಒಳ್ಳಿದನು | ಎಲ್ಲ ಜಾತಿಯೊಳಿಹರು | ಕಳ್ಳನೊಂದೆಡೆಗೆ ಉಪಕಾರಿ ಪಂಚಾಳ | ನೆಲ್ಲರಲಿ ಕಳ್ಳ ಸರ್ವಜ್ಞ ||
--------------
ಸರ್ವಜ್ಞ
ಜಾತಿ-ಜಾತಿಗೆ ವೈರ | ನೀತಿ ಮೂರ್ಖಗೆ ವೈರ | ಪಾತಕವು ವೈರ ಸುಜನರ್ಗೆ ಅರಿದರಿಗೆ ಏತರದು ವೈರ ಸರ್ವಜ್ಞ ||
--------------
ಸರ್ವಜ್ಞ
ಜಾತಿಹೀನರ ಮನೆಯ | ಜ್ಯೋತಿ ತಾ ಹೀನವೇ | ಜಾತಿ-ವಿಜಾತಿಯೆನ್ನಬೇಡ ದೇವನೊಲಿ | ದಾತನೇ ಜಾತ ಸರ್ವಜ್ಞ ||
--------------
ಸರ್ವಜ್ಞ
ಧಾತು ಏಳನು ಕಲೆತು | ಭೂತಪಂಚಕವಾಗಿ | ಓತು ದೇಹವನು ಧರಿಸಿರ್ದ ಮನುಜರ್ಗೆ | ಜಾತಿಯತ್ತಣದು ಸರ್ವಜ್ಞ ||
--------------
ಸರ್ವಜ್ಞ
ಭೂತೇಶಗೆರಗುವನು | ಜಾತಿ ಮಾದಿಗನಲ್ಲ | ಜಾತಿಯಲಿ ಹುಟ್ಟಿ ಶಿವನಿಂಗೆ ಶರಣೆನ್ನ | ದಾತ ಮಾದಿಗರು ಸರ್ವಜ್ಞ ||
--------------
ಸರ್ವಜ್ಞ
ಭೊತೇಶ ಶರಣೆಂಬ | ಜಾತಿ ಮಾದಿಗನಲ್ಲ ಜಾತಿಯಲಿ ಹುಟ್ಟಿ ಭೊತೇಶ - ಶರಣೆನ್ನ ದಾತ ಮಾದಿಗನು ಸರ್ವಜ್ಞ
--------------
ಸರ್ವಜ್ಞ
ಯಾತರ ಹೂವಾದರು | ನಾತರೆ ಸಾಲದೆ ಜಾತಿ- ವಿಜಾತಿಯೆನಬೇಡ - ಶಿವನೊಲಿ ದಾತನೇ ಜಾತಿ ಸರ್ವಜ್ಞ
--------------
ಸರ್ವಜ್ಞ
ಯಾತರದು ಹೂವೇನು | ನಾತರದು ಸಾಲದೇ | ಜಾತಿ ವಿಜಾತಿಯೆನ್ನಬೇಡ | ದೇವನೊಲಿ ದಾತನೇ ಸರ್ವಜ್ಞ ||
--------------
ಸರ್ವಜ್ಞ
ಸೀತಧಾತುಗಳುಂಟು | ಜಾತಿಹವು ಕುಕ್ಷಿಗಳು | ಪಾತಕರು ಮರದಿ ತಿರಿದುಂಬ ನಾಡಿಗೆ | ಏತಕ್ಕೆ ಬಹರು ಸರ್ವಜ್ಞ ||
--------------
ಸರ್ವಜ್ಞ