ಒಟ್ಟು 9 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುತ್ತಿಗದು ಹರಿದಿಹುದು | ಮತ್ತೆ ಬರುತರೇಳುವದು | ಕಿತ್ತು ಬಿಸುಡಲು ನಡೆಯುವದು ಕವಿಜನರ | ಅರ್ತಿಯಿಂ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಕೂಳು ಕುತ್ತವೆ ಕುತ್ತ ಕೂಳು ಮೇಳವೆ ಮೇಳ | ಕೂಳೊಂದುಗಳಿಗೆ ತಡೆದಿಹರೆ ಪಾತರದ ಮೇಳ ಮುರಿದಂತೆ ಸರ್ವಜ್ಞ ||
--------------
ಸರ್ವಜ್ಞ
ಗಾಣಿಗನ ಒಡನಾಟ | ಕೋಣನಾ ಬೇಸಾಯ | ಕ್ಷೀಣಿಸುವ ಕುತ್ತ-ಸಮರ ಕ್ಷಾಮಗಳಿಂದ | ಪ್ರಾಣವೇಗಾಸಿ ಸರ್ವಜ್ಞ ||
--------------
ಸರ್ವಜ್ಞ
ನೆತ್ತವದು ಒಳಿತೆಂದು | ನಿತ್ಯವಾಡಲು ಬೇಡ | ನೆತ್ತದಿಂ ಕುತ್ತ್ - ಮುತ್ತಲೂ ಸುತ್ತೆಲ್ಲ | ಕತ್ತಲಾಗಿಹುದು ಸರ್ವಜ್ಞ ||
--------------
ಸರ್ವಜ್ಞ
ನೆತ್ತವೂ ಕುತ್ತವೂ | ಹತ್ತದೊಡೆ ಅಳವಲ್ಲ | ಕುತ್ತದಿಂ ದೇಹ ಬಡದಕ್ಕು ನತ್ತದಿಂ | ಅತ್ತಲೇ ಅಕ್ಕು ಸರ್ವಜ್ಞ ||
--------------
ಸರ್ವಜ್ಞ
ನೆತ್ತಿಯಲೆ ಉಂಬುವದು | ಸುತ್ತಲೂ ಸುರಿಸುವದು | ಎತ್ತಿದರೆ ಎರಡು ಹೋಳಹುದು ಕವಿಗಳಿಂದ ಕುತ್ತರವ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಮುದ್ದು ಮಂತ್ರವು ಶುಕನು | ತಿದ್ದುವವು ಕುತ್ತಗಳ | ತಿದ್ದಿಯೂ ತಿದ್ದಲರಿಯವವು ಶಿವನೊಲಿಯ | ದಿದ್ದಿಹರೆ ಕಾಣೊ ಸರ್ವಜ್ಞ ||
--------------
ಸರ್ವಜ್ಞ