ಒಟ್ಟು 6 ಕಡೆಗಳಲ್ಲಿ , 1 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಕಿಯನು ಉಂಬುವನು | ಹಕ್ಕಿಯಂತಾಗುವನು | ಸಿಕ್ಕು ರೋಗದಲಿ ರೊಕ್ಕವನು ವೈದ್ಯನಿಗೆ ಇಕ್ಕುತಲಿರುವ ಸರ್ವಜ್ಞ ||
--------------
ಸರ್ವಜ್ಞ
ಒಚ್ಚೊತ್ತು ಉಂಬುವದು | ಕಿಚ್ಚತಾ ಕಾಯುವದು | ಬೆಚ್ಚನಾ ಠಾವಿಲೋಗಿದರೆ ವೈದ್ಯನಾ | ಕಿಚ್ಚಲಿಕ್ಕೆಂದ ಸರ್ವಜ್ಞ ||
--------------
ಸರ್ವಜ್ಞ
ಕೊಂಬುವನು ಸಾಲವನು | ಉಂಬುವನು ಲೇಸಾಗಿ | ಬೆಂಬಲವ ಪಿಡಿದು - ಬಂದರಾದೇಗುಲದ | ಕಂಬದಂತಿಹನು ಸರ್ವಜ್ಞ ||
--------------
ಸರ್ವಜ್ಞ
ನೆತ್ತಿಯಲೆ ಉಂಬುವದು | ಸುತ್ತಲೂ ಸುರಿಸುವದು | ಎತ್ತಿದರೆ ಎರಡು ಹೋಳಹುದು ಕವಿಗಳಿಂದ ಕುತ್ತರವ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಬೇಡಂಗೆ ಕೊಡೆ ಹೊಲ್ಲ | ಆಡಿಂಗಮಳೆಹೊಲ್ಲ | ಬೇಡಿ ಉಂಬುವಂಗೆ ಬರ ಹೊಲ್ಲ ದ್ವಿಜನಿಗೆ | ಕಾಡುನುಡಿ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ರಾಗಿಯನ್ನು ಉಂಬುವ ನಿ | ರೋಗಿ ಎಂದೆನಿಸುವನು | ರಾಗಿಯು ಭೋಗಿಗಳಿಗಲ್ಲ ಬಡವರಿಂ | ಗಾಗಿ ಬೆಳೆದಿಹುದು ಸರ್ವಜ್ಞ ||
--------------
ಸರ್ವಜ್ಞ