ಒಟ್ಟು 80 ಕಡೆಗಳಲ್ಲಿ , 1 ವಚನಕಾರರು , 70 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹದ ಬೆದೆಯಲಾರಂಭ | ಕದನಲಿ ಕೂರಂಬ | ನದಿ ಹಾಯುವಲಿ ಹರಗೋಲ ಮರೆತು | ವಿಧಿಯ ಬೈದರೇನು ಫಲ ಸರ್ವಜ್ಞ ||
--------------
ಸರ್ವಜ್ಞ
ಹರ ತನ್ನೊಳಿರ್ದುದ | ಗುರುತೋರಿ | ದಿರಲಹುದೆ | ಮರನೊಳಗ್ನಿ ಇರುತಿರ್ದು - ತನ್ನ ತಾ ನುರಿವುದ ಕಂಡ ? ಸರ್ವಜ್ಞ
--------------
ಸರ್ವಜ್ಞ
ಹರನಾವ ಕರೆಯದಲೆ | ಪರಿಶಿವನ ನೆನೆಯದಲೆ | ಸ್ಮರಹರನ ಕರುಣವಿಲ್ಲದೆಯೆ ಜಗದೊಳಗೆ ಇರುವದೇ ಕಷ್ಟ ಸರ್ವಜ್ಞ ||
--------------
ಸರ್ವಜ್ಞ
ಹರಳು ಉಂಗುರ ಲೇಸು | ಹುರುಳಿ ಕುದುರೆಗೆ ಲೇಸು | ಮರುಳ ನೆಲ ತೆಂಗು ಇರಲೇಸು | ಸ್ತ್ರೀಯರ | ಕುರುಳು ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ಹರಳು ಹಾದಿಗೆ ಹೊಲ್ಲ | ಮರುಳ ಮನೆಯೊಳು ಹೊಲ್ಲ | ಇರುಳೊಳು ಪಯಣ ಬರಹೊಲ್ಲ ಆಗದರಲಿ | ಸರಸವೇ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಹರಿಬ್ರಹ್ಮರೆಂಬವರು | ಹರನಿಂದಲಾದವರು ಅರಸಿಂಗೆ ಆಳು ಸರಿಯಹನೆ - ಪಶುಪತಿಗೆ ಸರಿ ಯಾರ ಕಾಣೆ ಸರ್ವಜ್ಞ
--------------
ಸರ್ವಜ್ಞ
ಹಲವು ಸಂಗದ ತಾಯಿ | ಹೊಲಸು ನಾರುವ ಬಾಯಿ | ಸಲೆ ಸ್ಮರಹರನ ನೆನೆಯದಾ ಬಾಯಿ ನಾಯ್ | ಮಲವ ಮೆದ್ದಂತೆ ಸರ್ವಜ್ಞ ||
--------------
ಸರ್ವಜ್ಞ
ಹುಲಿಯ ಬಾಯಲ್ಲಿ ಸಿಕ್ಕ | ಹುಲ್ಲೆಯಂದದಿ ಮೊರವೆ | ಬಲಿಯ ಬಿಡಿಸೆನ್ನ ಗುರುರಾಯ ಮರೆಹೊಕ್ಕೆ | ಕೊಲುತಿಹಳು ಮಾಯೆ ಸರ್ವಜ್ನ್ಯ ||
--------------
ಸರ್ವಜ್ಞ
ಹುಸಿವನಿಂದೈನೂರು | ಪಶುವ ಕೊಂದವ ಲೇಸು | ಶಿಶು ವಧೆಯಮಾಡಿದವ ಲೇಸು ಮರೆಯಲಿ | ದ್ದೆಸೆದರೂ ಲೇಸು ಸರ್ವಜ್ಞ ||
--------------
ಸರ್ವಜ್ಞ
ಹೆಣ್ಣನ್ನು ಹೊನ್ನನ್ನು | ಹಣ್ಣಾದ ಮರಗಳನ್ನು | ಕಣ್ಣಿಂದ ಕಂಡು ಮನದಲ್ಲಿ ಬಯಸದಿಹ | ಅಣ್ಣಗಳು ಯಾರು ಸರ್ವಜ್ಞ ||
--------------
ಸರ್ವಜ್ಞ