ಒಟ್ಟು 159 ಕಡೆಗಳಲ್ಲಿ , 1 ವಚನಕಾರರು , 127 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾತಿಹೀನರ ಮನೆಯ | ಜ್ಯೋತಿ ತಾ ಹೀನವೇ | ಜಾತಿ-ವಿಜಾತಿಯೆನ್ನಬೇಡ ದೇವನೊಲಿ | ದಾತನೇ ಜಾತ ಸರ್ವಜ್ಞ ||
--------------
ಸರ್ವಜ್ಞ
ಜಾರತ್ವವೆಂಬುವದು | ಕ್ಷೀರಸಕ್ಕರೆಯಂತೆ | ಊರಲ್ಲಿ ಒಬ್ಬರರಿತಿಹರೆ ಬೇವಿನಾ | ಸಾರದಂತಿಹುದು ಸರ್ವಜ್ಞ ||
--------------
ಸರ್ವಜ್ಞ
ಜಾವಕ್ಕೆ ಬದುಕುವರೆ | ಹೇವಕ್ಕೆ ಬದುಕುವದು | ರಾವಣನು ಸತ್ತನೆನಬೇಡ ರಾಮಂಗೆ | ಹೇವ ಬಿಟ್ಟಿಹುದು ಸರ್ವಜ್ಞ ||
--------------
ಸರ್ವಜ್ಞ
ಜೋಳದಾ ಬೋನಕ್ಕೆ | ಬೇಳೆಯಾ ತೊಗೆಯಾಗಿ | ಕಾಳೆಮ್ಮೆ ಕರೆದ ಹೈನಾಗಿ ಬೆಳವಲದ ಮೇಳ ನೋಡೆಂದ ಸರ್ವಜ್ಞ ||
--------------
ಸರ್ವಜ್ಞ
ಜೋಳವನು ತಿಂಬುವನು | ತೋಳದಂತಾಗುವನು | ಬೇಳೆ-ಬೆಲ್ಲಗಳನುಂಬವನು ಬಹು ಬಾಳನೆಂದರಿಗು ಸರ್ವಜ್ಞ ||
--------------
ಸರ್ವಜ್ಞ
ತತ್ವದಾ ಜ್ಞಾನತಾ | ನುತ್ತಮವು ಎನಬೇಕು | ಮತ್ತೆ ಶಿವಧ್ಯಾನ ಬೆರೆದರದು | ಶಿವಗಿರಿಂ | ದತ್ತಲೆನಬೇಕು ಸರ್ವಜ್ಞ ||
--------------
ಸರ್ವಜ್ಞ
ತಿತ್ತಿ ಹೊಟ್ಟೆಗೆ ಒಂದು | ತುತ್ತು ತಾ ಹಾಕುವದು | ತುತ್ತೆಂಬ ಶಿವನ ಬಿಟ್ಟಿಹರೆ ಸುಡುಗಾಡಿ | ಗೆತ್ತಬೇಕೆಂದ ಸರ್ವಜ್ಞ ||
--------------
ಸರ್ವಜ್ಞ
ತುಂಬಿದಾ ಕೆರೆ ಭಾವಿ | ತುಂಬಿದಂತಿರುವದೇ | ನಂಬಿರಲು ಬೇಡ ಲಕ್ಶ್ಮಿಯನು ಬಡತನವು | ಬೆಂಬಿಡದೆ ಬಹುದು ಸರ್ವಜ್ಞ ||
--------------
ಸರ್ವಜ್ಞ
ತೆಗೆದತ್ತಿಳೀಯುವದು | ಮಿಗಿಲೆತ್ತರೇರಿಹುದು | ಬಗೆಯ ರಸತುಂಬಬಹು ಸಂಚದ ತ್ರಾಸ | ನಗೆಹಲೇ ಬೇಡ ಸರ್ವಜ್ಞ ||
--------------
ಸರ್ವಜ್ಞ
ದಂಡು ಇಲ್ಲದ ಅರಸು | ಕುಂಡವಿಲ್ಲದ ಹೋಮ | ಬಂಡಿಯಿಲ್ಲದನ ಬೇಸಾಯ ತಲೆಹೋದ | ಮುಡದಂತಿಕ್ಕು ಸರ್ವಜ್ಞ ||
--------------
ಸರ್ವಜ್ಞ
ದರುಶನವಾರಿರಃ | ಪುರುಷರು ಮೂವರಿಂ ಪರತತ್ವದಿರವು ಬೇರೆಂದು - ತೋರಿದ ಗುರು ತಾನೆ ದೈವ ಸರ್ವಜ್ಞ
--------------
ಸರ್ವಜ್ಞ
ದಿನಪತಿಗೆ ಎಣೆಯಿಲ್ಲ | ಧನಪತಿ ಸ್ಥಿರವಲ್ಲ | ಅನುಭವಿಗೆ ಬೇರೆ ಮತವಿಲ್ಲ ಅರಿದಂಗೆ | ಮುನಿವವರೆ ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ದೇಹಿಯೆನಬೇಡ ನಿ | ದೇಹಿ ಜಂಗಮ ದೇವ ದೇಹಗುಣದಾಶೆಯಳಿದರೆ - ಆತ ನಿ ದೇಹಿ ಕಂಡಯ್ಯ ಸರ್ವಜ್ಞ
--------------
ಸರ್ವಜ್ಞ
ನಟ್ಟಡವಿಯಾ ಮಳೆಯು | ದುಷ್ಟರಾ ಗೆಳೆತನವು | ಕಪ್ಪೆಯಾದವಳ ತಲೆಬೇನೆ ಇವು ಮೂರು ಕೆಟ್ಟರೇ ಲೇಸು ಸರ್ವಜ್ಞ ||
--------------
ಸರ್ವಜ್ಞ
ನರರ ಬೇಡುವ ದೈವ | ವರವೀಯ ಬಲ್ಲುದೇ ತಿರಿವವರನಡರಿ ತಿರಿವಂತೆ - ಅದನರೆ ಹರನನೆ ಬೇಡು ಸರ್ವಜ್ಞ
--------------
ಸರ್ವಜ್ಞ